ನೈಸರ್ಗಿಕ ಆಹಾರೋತ್ಪನ್ನಗಳ ಸಿರಿಧಾನ್ಯ ಅಡುಗೆ ಎಂಬ ಕೃತಿಯನ್ನು ಲೇಖಕ ಎಂ.ಎಚ್. ಶ್ರೀಧರಮೂರ್ತಿ ಅವರು ರಚಿಸಿದ್ದು, ಸುಮಾರು 60ಕ್ಕೂ ಆಧಿಕ ಸಿರಿಧಾನ್ಯಗಳ ಸಿರಿಪಾಕಗಳ ಕುರಿತ ಸಮೃದ್ಧ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಆಹಾರೋತ್ಪನ್ನಗಳ ಸೇವನೆ ಮುಖ್ಯ. ಈಗೀಗಂತೂ ಸಾವಯವ ಕೃಷಿ ಕಡಿಮೆಯಾಗುತ್ತಿದೆ. ರಾಸಾಯನಿಕಗಳ ಬಳಕೆ ಹೆಚ್ಚಿ, ಬೆಳೆಗಳು ನಮಗೆ ಗೊತ್ತಿರದ ಹಾಗೆ ವಿಷವನ್ನು ಒಳಗೊಳ್ಳುತ್ತಿವೆ. ಹೀಗಾಗಿ, ಸಿರಿಧಾನ್ಯಗಳ ಬಳಕೆ, ಸೇವನೆ ಕುರಿತು ಉಪಯುಕ್ತ ಮಾಹಿತಿ ನೀಡುವ ಮತ್ತು ಈ ಸಿರಿಧಾನ್ಯಗಳಿಂದ ರಸಪಾಕಗಳನ್ನು ಹೇಗೆ ತಯಾರಿಸಬೇಕು ಎಂಬುದರ ಮಾಹಿತಿಯೂ ಈ ಕೃತಿಯಲ್ಲಿದೆ.
©2024 Book Brahma Private Limited.