ಹೃದ್ರೋಗಿಗಳಿಗೆ ಆಹಾರದ 201 ಸಲಹೆಗಳು ಎಂಬುದು ಡಾ. ಬಿಮಲ್ ಛಾಜರ್ ಅವರು ರಚಿಸಿದ ಕೃತಿ. ಆಹಾರ ತಿನಿಸುಗಳಿದ್ದರೂ ಯಾವುದನ್ನು ಯಾವಾಗ, ಎಷ್ಟು ತಿನ್ನಬೇಕು ಎಂಬುದರ ವಿವೇಕ ಅಗತ್ಯ. ಏಕೆಂದರೆ, ಪ್ರತಿ ಆಹಾರದ ತಿನಿಸು ತನ್ನದೇ ರುಚಿ ಮಾತ್ರವಲ್ಲ; ಜೀವಸತ್ವಗಳನ್ನು ಪ್ರೌಷ್ಟಿಕ ಅಂಶಗಳನ್ನು ಒಳಗೊಂಡಿರುತ್ತದೆ. ದೇಹದೊಳಕ್ಕೆ ಸೇರಿದ ಮೇಲೆ ಅವು ಉಂಟು ಮಾಡುವ ರಾಸಾಯನಿಕ ಕ್ರಿಯೆಗಳು ಸಹ ವಿಭಿನ್ನವಾಗಿರುತ್ತವೆ. ಎಲ್ಲವೂ ಸರಿಯಾಗಿ ಆರೋಗ್ಯಕರವಾಗಿ ನಡೆಯಬೇಕಾದರೆ ಆಹಾರ ತಿನಿಸುಗಳ ಆರೋಗ್ಯಕರ ಮಾಹಿತಿಗಳನ್ನು ಪ್ರತಿ ವ್ಯಕ್ತಿಯೂ ತಿಳಿದಿರಬೇಕಾದ ಅಂಶ. ಈ ಹಿನ್ನೆಲೆಯಲ್ಲಿ, ಅತ್ಯುತ್ತಮ ಮಾಹಿತಿ ನೀಡುವ ಕೃತಿ ಇದು.
©2024 Book Brahma Private Limited.