ಪ್ರಾಚೀನ ಕಾಲದಿಂದಲೂ ಭಾರತದ ಸಂಬಾರ ಜಿನಸುಗಳು ವಿದೇಶಗಳಿಗೂ ರಫ್ತಾಗುತ್ತಿದ್ದು ಲೋಕ ಪ್ರಸಿದ್ಧಿ ಮತ್ತು ಪೋರ್ಚುಗೀಸ್, ಬ್ರಿಟೀಷರು ಭಾರತಕ್ಕೆ ದಾಳಿ ಮಾಡಿದುದ್ದರ ಉದ್ದೇಶದ ಹಿಂದೆ ಈ ಭಾರತೀಯ ಸಾಂಬಾರ ಪದಾರ್ಥಗಳು ಇತ್ತೆಂಬುದನ್ನು ಇತಿಹಾಸ ಮರೆಯುವಂತಿಲ್ಲ. ಇಂತಹ ಸಾಂಬರ ಪದಾರ್ಥಗಳು ಅಡುಗೆಗಷ್ಟೇ ಅಲ್ಲದೆ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಹಲವು ವಿಧದ ಸಾಮಾನ್ಯ ಕಾಯಿಲೆಗಳ ನಿವಾರಣೆಗೂ ಬಳಸಲ್ಪಡುತ್ತಿದ್ದು ಅವನ್ನು ಮನೆಮದ್ದೆಂದು ಪರಿಗಣಿಸಿ ಜನ ಇಂದಿಗೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬಗೆ ಮತ್ತು ಸಸ್ಯಜನ್ಯ ಪದಾರ್ಥಗಳಾದ ಗಿಡ-ಮರಗಳ ಎಲೆ, ತೊಗಟೆ, ಕಾಳು, ಬೇರು, ಗೆಡ್ಡೆ ಮತ್ತು ಕಾಯಿಗಳನ್ನು ಉಪಯೋಗಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವ ಬಗೆಯನ್ನು ಲೇಖಕಿ ಇಲ್ಲಿ ಸವಿಸ್ತಾರವಾಗಿ ತಿಳಿಸಿದ್ಧಾರೆ. ಈ ಸಾಂಬರ ಪದಾರ್ಥಗಳು ಆರೋಗ್ಯ ಸುಧಾರಿಸುವುದಲ್ಲದೆ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.
©2025 Book Brahma Private Limited.