‘ಲೂಸಿ ಸಾಲ್ಡಾನಾ ಸಂಗ್ರಹಿತ ಅಡುಗೆ ವೈವಿಧ್ಯ’ ಎಂಬುದು ಸಾಹಿತಿ ವೈ.ಬಿ.ಕಡಕೋಳ ಅವರ ಸಂಪಾದನಾ ಕೃತಿ. ಗುರುಮಾತೆ ಲೂಸಿ ಸಾಲ್ಡಾನಾ ಅವರು ಬರೆದಿಟ್ಟಿದ್ದ ನೋಟ್ ಪುಸ್ತಕದಲ್ಲಿನ ಅಡುಗೆಯ ವಿವಿಧ ಪ್ರಕಾರಗಳನ್ನು ಕ್ರಮಬದ್ದವಾಗಿ ಹೊಂದಿಸಿ.ಅವುಗಳಿಗೆ ಮಹತ್ವದ ಟಿಪ್ಪಣಿಗಳನ್ನು ಬರೆಯುವ ಜೊತೆಗೆ ಅಡುಗೆ ಮತ್ತು ಅಡುಗೆ ಮನೆಯ ಮಹತ್ವವನ್ನು ಸಂಪಾದಕ ಲೇಖಕರು ಅರ್ಥಪೂರ್ಣವಾಗಿ ಜೋಡಿಸಿದ್ದಾರೆ.
ಸಾಹಿತಿ ಡಾ. ರೇಣುಕಾ ಅಮಲಝರಿ ಕೃತಿಯ ಕುರಿತು ‘ ಶ್ರೀಮತಿ ಲೂಸಿ ಸಾಲ್ಡಾನಾ ಅವರು ಶಿಕ್ಷಕ ವೃತ್ತಿಯಲ್ಲಿದ್ದಾಗ ಮಕ್ಕಳಿಗೆ ಜ್ಞಾನದ ಸವಿಯೂಟ ಮಾಡಿಸಿದ್ದಾರೆ. ನಿವೃತ್ತಿಯ ನಂತರವೂ ಸರಕಾರಿ ಶಾಲೆಗಳು ಸಂಘಸಂಸ್ಥೆಗಳಿಗೆ ದತ್ತಿ ದಾನ ನೀಡಿ ಶಾಲಾ ಮಕ್ಕಳ ಅಕ್ಷರದ ಬದುಕನ್ನು ಸಮೃದ್ದಿಗೊಳಿಸುವ ಕಾರ್ಯದ ಜೊತೆಗೆ ಬರಹದ ಕೆಲಸವನ್ನು ಪ್ರೀತಿಸುತ್ತಿದ್ದಾರೆೆ. ವಾಯ್.ಬಿ.ಕಡಕೋಳ ಸಂಪಾದಕರು, ಸವಿ ಮತ್ತು ಸಿಹಿ ಭೋಜನದ ವೈವಿಧ್ಯ ಅಡುಗೆಗಳ ರುಚಿ ಹೆಚ್ಚಿಸಲು ಕಾರಣರಾಗಿದ್ದಾರೆ. ಇಲ್ಲಿನ ಪರಿವಿಡಿ ಗಮನಿಸಿದರೆ ಇದರಲ್ಲಿ ಸಿಹಿ ಅಡುಗೆಗಳು ತರಕಾರಿ ಅಡುಗೆಗಳು ಅಕ್ಕಿ ಜೋಳ ಗೋಧಿ ಧಾನ್ಯದಿಂದ ಮಾಡಿದ ಅಡುಗೆಗಳು ವಿವಿಧ ಬಗೆಯ ಸಾಂಬಾರು.ಸೂಪ್.ಶರಬತ್ತು ವಿಧಗಳು. ಚಟ್ನಿಗಳು.ವಿವಿಧ ಬಗೆಯ ಉಪ್ಪಿನಕಾಯಿ ವಿಧಾನಗಳು.ಹೀಗೆ ಹಲವು ವಿಭಾಗಗಳನ್ನು ಅಡುಗೆಯ ವೈವಿಧ್ಯದಲ್ಲಿ ಸೇರಿಸಿರುವರು.ಕೊನೆಯಲ್ಲಿ, ಲೂಸಿ ಸಾಲ್ಡಾನಾ ಗುರುಮಾತೆಯ ಕುರಿತು ಚಲನಚಿತ್ರ ನಿರ್ದೇಶಿಸುತ್ತಿರುವ ನಿರ್ದೇಶಕ ಬಾಬಾಜಾನ ಮುಲ್ಲಾ ಸಹನಿರ್ದೇಶಕ ನಂದಕುಮಾರ ದ್ಯಾಂಪುರ. ಲೂಸಿ ಸಾಲ್ಡಾನಾ ಬದುಕಿನ ಕಿರು ನೋಟದ ಮೇಲೆ ಬೆಳಕು ಚಲ್ಲುವ ಬರಹವನ್ನು ಎಲ್.ಐ.ಲಕ್ಕಮ್ಮನವರ ರೂಪಿಸಿದ್ದು ಜೊತೆಗೆ ಇಲ್ಲಿಯವರೆಗೂ ಲೂಸಿ ಸಾಲ್ಡಾನಾ ದತ್ತಿ ನೀಡಿದ ಶಾಲೆಗಳ ಪಟ್ಟಿಯನ್ನು ನೀಡಿರುವರು’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.