ಆಹಾರ ತಜ್ಞ ಡಾ. ಖಾದರ ವಲಿ ಅವರು ತೆಲುಗು ಭಾಷೆಯಲ್ಲಿ ಬರೆದ ವಿಚಾರ-ಸಲಹೆಗಳನ್ನು ಚೇಕಟಿ ಶ್ರೀನಿವಾಸ್ ಅವರು ಸಂಗ್ರಹಿಸಿದ್ದು, ಲೇಖಕಿ ಕೆ.ವಿ. ರಾಜೇಶ್ವರಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಸಂಪೂರ್ಣ ಆರೋಗ್ಯಕ್ಕೆ ಸಿರಿಧಾನ್ಯಗಳು. ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಸೇವನೆಯು ಬಹು ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇವುಗಳ ಕುರಿತು ಗ್ರಾಮೀಣ ಜನರಿಗೆ ಒಂದಿಷ್ಟು ಮಾಹಿತಿ ಹೊರತುಪಡಸಿದರೆ ನಗರ ಜನರಿಗೆ ಸಿರಿಧಾನ್ಯಗಳ ಮಹತ್ವ ತಿಳಿದಿಲ್ಲ ಎಂದೇ ಹೇಳಬೇಕು. ರಾಗಿ, ತೊಗರಿ, ಹೆಸರು, ಅಲಸಂದಿ ಹೀಗೆ ಸಿರಿಧಾನ್ಯಗಳು ಆರೋಗ್ಯವನ್ನು ಹೆಚ್ಚಿಸುತ್ತವೆ ಮಾತ್ರವಲ್ಲಕ; ರೋಗನಿರೋಧಕಗಳಾಗಿಯೂ ಕೆಲಸ ಮಾಡುತ್ತವೆ. ಸಿರಿಧಾನ್ಯಗಳನ್ನು ಸೇವಿಸುವ ವ್ಯಕ್ತಿಯ ಆರೋಗ್ಯವು ರೋಗಮುಕ್ತವಾಗಿದ್ದು, ಬಹು ಕಾಲ ಬಾಳುವ ಭಾಗ್ಯವನ್ನೂ ಪಡೆಯುತ್ತಾನೆ. ತಪ್ಪಿದರೆ, ವ್ಯಕ್ತಿಯು ರೋಗಗಳಿಗೆ ಬಹುಬೇಗನೆ ತುತ್ತಾಗುತ್ತಾನೆ ಎಂದರೆ ಅತಿಶಯೋಕ್ತಿಯಲ್ಲ. ಈ ಸಂಗತಿಗಳ ಕುರಿತು ಮಾಹಿತಿ ಒಳಗೊಂಡಿರುವ ಕೃತಿ ಇದು.
©2024 Book Brahma Private Limited.