‘ಉಟಾ… ಹಾರ’ ಕೃತಿಯು ಕೆ.ಈ ರಾಧಾಕೃಷ್ಣ ಅವರ ಲೇಖನಸಂಕಲನವಾಗಿದೆ. ಲಘುಧಾಟಿಯಲ್ಲಿ ಲೇಖಕರು ಇಲ್ಲಿನ ಬರಹಗಳಿಗೆ ಪ್ರವೇಶಿಕೆಯೊಂದನ್ನು ಕಲ್ಪಿಸುತ್ತಾರಾದರೂ, ಅವುಗಳಲ್ಲಿ ಅಪೂರ್ವ ಮಾಹಿತಿಯೂ ಅಡಕವಾಗಿರುವುದು ಗಮನಾರ್ಹ. ಇಲ್ಲಿ ಏಳು ಭಾಗಗಳಾಗಿ ಅವರು ಮೂವತ್ತೆಂಟು ಲೇಖನಗಳನ್ನು ವರ್ಗೀಕರಿಸಿದ್ದಾರೆ. ‘ನನ್ನಗೀತೆ-ಧರ್ಮಗೀತೆ’, ‘ಮೂಲಧಾರ-ಮೂಲಾಹಾರ’, ‘ನಿತ್ಯಾನಂದಕರೀ- ಬಲಕರೀ’, ‘ಪಿಬರೇ ಆನಂದರಸಮ್’.. ಹೀಗೆ ಅಧ್ಯಾಯಗಳಿಗೆ ಅವರು ನೀಡಿರುವ ಶೀರ್ಷಿಕೆಯೇ ಭಿನ್ನವಾಗಿದೆ. ಮೊದಲ ಭಾಗದಲ್ಲಿ ವಿವಿಧ ಧರ್ಮಗಳಲ್ಲಿ ಅನ್ನಾಹಾರದ ಕುರಿತ ಉಲ್ಲೇಖಗಳನ್ನು ಬಳಸಿಕೊಂಡು ರಾಧಾಕೃಷ್ಣ ಅವರು ಲೇ ಖನಗಳನ್ನು ಬರೆದಿದ್ದಾರೆ. ಸ್ತೋತ್ರಗಳು, ಬೈಬಲ್ ನಲ್ಲಿನ ಉಲ್ಲೇಖಗಳು, ಇಸ್ಲಾಂ ಧರ್ಮ ಯಾವ್ಯಾವುದನ್ನು ಪವಿತ್ರ ಆಹಾರ ಎನ್ನುತ್ತದೆ ಎನ್ನುವುದರ ಪ್ರಸ್ತಾಪ, ಜೈನಾಹಾರ ಹೇಗಿರುತ್ತದೆ ಎನ್ನುವ ಒಳನೋಟ ಎಲ್ಲವನ್ನೂ ಒಳಗೊಂಡ ಭಾಗವು ಲಘು ಧಾಟಿಯ ಬರಹಗಳಲ್ಲೂ ಇರುವ ಅಧ್ಯಯನಶೀಲ ಗುಣವನ್ನೂ ಅನಾವರಣಗೊಳಿಸುತ್ತದೆ.
©2024 Book Brahma Private Limited.