ಸಿರಿಧಾನ್ಯಗಳ ವಿಶೇಷ ಅಡುಗೆಗಳ ಮಾಹಿತಿಪೂರ್ಣ ಕೃತಿ-ಆರೋಗ್ಯ ಸಿರಿ. ಲೇಖಕ ಜಯಪ್ರಸಾದ್ ಬಳ್ಳೇಕೆರೆ ರಚಿಸಿದ್ದಾರೆ. ಸಿರಿಧಾನ್ಯಗಳ ಸೇವನೆ ವ್ಯಕ್ತಿಯ ಆರೋಗ್ಯಕ್ಕೆ ಲಾಭಕರ. ಗಾತ್ರದಲ್ಲಿ ಈ ಧಾನ್ಯಗಳು ಸಣ್ಣವು ಎಂದು ಕಂಡರೂ ಪೌಷ್ಟಿಕತೆ ದೃಷ್ಟಿಯಿಂದ ಅತ್ಯಂತ ಸಮೃದ್ಧ. ಇಂತಹ ಸಿರಿಧಾನ್ಯಗಳ ಸೇವನೆ ಹಾಗೂ ಬೆಳೆಯುವ ಅಗತ್ಯ ಮತ್ತು ಅನಿವಾರ್ಯತೆಯನ್ನು ಪ್ರತಿಪಾದಿಸುವ ಶಿಕ್ಷಣ ವ್ಯವಸ್ಥೆ ಇಲ್ಲ; ಇದ್ದರೂ ನಿರ್ಲಕ್ಷಿಸಲಾಗುತ್ತಿದೆ. ಈ ಸಂಗತಿಯನ್ನು ಎತ್ತಿಕೊಂಡಿರುವ ಲೇಖಕರು, ಸಿರಿಧಾನ್ಯಗಳ ಮಹತ್ವ ಹಾಗೂ ಅವುಗಳಿಂದ ತಯಾರಿಸಬಹುದಾದ ವಿಶೇಷ ಅಡುಗೆಗಳ ಬಗ್ಗೆ ಮಾಹಿತಿ ನೀಡುತ್ತಾರೆ.
©2024 Book Brahma Private Limited.