ಆರೋಗ್ಯ ಮತ್ತು ಜೀವನ ಶೈಲಿ

Author : ಪಿ.ಎಸ್. ಶಂಕರ್

Pages 120

₹ 85.00




Year of Publication: 2018
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060\n

Synopsys

ಲೇಖಕ ಪಿ.ಎಸ್.ಶಂಕರ್ ಅವರ ಕಥಾ ಸಂಕಲನ "ಆರೋಗ್ಯ ಮತ್ತು ಜೀವನ ಶೈಲಿ".ಈ ಸಂಕಲನದ ಪರಿವಿಡಿಯಲ್ಲಿ ಮುಖ್ಯವಾಗಿ ಆರೋಗ್ಯ ಮತ್ತು ಜೀವನ ಶೈಲಿ,ಆರೋಗ್ಯ ಪಥದಲ್ಲಿ ಪಯಣ,ಆರೋಗ್ಯ ಕ್ಷೇತ್ರದ ತಪ್ಪು ಕಲ್ಪನೆ,ಬದಲುಗೊಳ್ಳುತ್ತಿರುವ ಹವಾಮಾನದಿಂದ ಆರೋಗ್ಯ ರಕ್ಷಣೆ,ಸ್ವಯಂ ಭಕ್ಷಣೆ ಕಾರ್ಯ,ಇಶೋ ಫುನಿ,ಜೀವನ ಜನ,ಜೀವನ ಮೌಲ್ಯಗಳು,ಖಿನ್ನತೆ ಬಗ್ಗೆ ಮಾತನಾಡೋಣ,ಮಿದುಳ ರಗಟೆಯ ಹೊಸ ಭೂಪಟ,ಮಿದುಳ ಆಘಾತ ತಪ್ಪಿಸಲು ಸುಲಭ ಓಷಧಿ,ರಕ್ತ ಒತ್ತಡದತ್ತ ಗಮನವಿರಲಿ,ಗುಪ್ತ ಸಕ್ಕರೆ ಕಾಯಿಲೆ,ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ,ಡಯಾಬಿಟಿಸ್‌ನತ್ತ ಗಮನ ಸೆಳೆದ ವಿಶ್ವ ಆರೋಗ್ಯ ಸಂಸ್ಥೆ, ಜೀವನ ಶೈಲಿ ಮತ್ತು ಕ್ಯಾನ್ಸರ್,ಅನ್ನನಾಳದ ಕ್ಯಾನ್ಸರ್,ಸ್ತನ ಕ್ಯಾನ್ಸರ್,ವಿಕಿರಣತೆಯ ಅಪಾಯ- ಝಾರ್ಖಂಡ್ ಗಣಿ,ಭಾರತದಿಂದ ಹೊರದೂಡಿಸಲ್ಪಟ್ಟ ಯಾಸ್,ಮಾರಕ ಮ್ಯಾಂಗಿ ಸ್ವಾದ ಹೆಚ್ಚಿಸುವ (ಗ್ಲುಟಮೇಟ್), ಅಂತರರಾಷ್ಟ್ರೀಯ ಖ್ಯಾತಿಯ ಮಕ್ಕಳ ತಜ್ಞೆ ಸಿಸಿಲಿ ವಿಲಿಯಮ್ಸ್‌,ಮಹಾ ಮಾನವತಾವಾದಿ ಸಾಮರವೆಲ್,ಜೇಮ್ಸ್‌ ಪಾರ್ಕಿನ್‌ಸನ್,ಮಹಾ ಮಾನವತಾ ವಾದಿ ಸಾಮರವೆಲ್,ನೊಬಲ್ ಪ್ರಶಸ್ತಿ ವಂಚಿತ ಭಾರತದ ವೈದ್ಯರು ಎಂಬ ಸಂಕಲನಗಳು ಇವೆ.

About the Author

ಪಿ.ಎಸ್. ಶಂಕರ್
(01 January 1936)

ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್‌. ಮೆಡಿಕಲ್‌ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.  ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್‌, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...

READ MORE

Related Books