ಲೇಖಕ ಪಿ. ಸದಾನಂದ ಮಯ್ಯ ಅವರ ಕೃತಿ-ಆಹಾರ ವಿಹಾರ ಭಾಗ-1. ಗ್ರಾಮೀಣ ಆಹಾರ ಪದ್ಧತಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅಲ್ಲಿಯ ಪೌಷ್ಠಿಕತೆ, ಶೀಘ್ರವೇ ಹಳಿಸಿ ಹೋಗದ ತಾಜಾತನ ಇಂತಹ ಅಂಶಗಳ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿ ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಲೇಖಕರಿಗೆ ಸಲ್ಲುತ್ತದೆ. ಒಂದು ದೇಶದ ಆಹಾರ ಪದ್ಧತಿಯು ಹೇಗೆ ವೈಜ್ಞಾನಿಕತೆಯನ್ನು ಮತ್ತು ರುಚುಕಟ್ಟಾದ ಸವಿಯನ್ನು ಒಳಗೊಂಡಿರುತ್ತದೆ ಎಂಬುದನ್ನು ಅಧ್ಯಯನದರ ಭಾಗವಾಗಿ ಪರಿಗಣಿಸಿದ್ದನ್ನು ಕಾಣಬಹುದು. ಆಹಾರದ ಪೌಷ್ಟಿಕತೆ, ರುಚಿ ಮಾತ್ರವಲ್ಲ; ಅದು ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂಬುದು ಮುಖ್ಯ.
©2025 Book Brahma Private Limited.