ಲೇಖಕಿ ವಾಣಿ ರವಿಶಂಕರ ಅವರು ಬರೆದ ಕೃತಿ-ರಾಗಿ ಮತ್ತು ರಾಗಿ ಹಿಟ್ಟಿನಲ್ಲಿ ಆರೋಗ್ಯಕರ ಮತ್ತು ರುಚಿಕರ ಅಡುಗೆಗಳು. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಅಷ್ಟೊಂದು ಸತ್ವಶಾಲಿ, ಪೌಷ್ಟಿಕತೆ ರಾಗಿ ಧಾನ್ಯದಲ್ಲಿದೆ. ರಾಗಿಯನ್ನು ಊಟ ಮಾಡುವ ವ್ಯಕ್ತಿ ಸದಾ ಆರೋಗ್ಯವಾಗಿರುತ್ತಾನೆ ಎಂಬುದು ಈ ಗಾದೆಯ ಅರ್ಥ. ಇಂತಹ ಪೌಷ್ಟಿಕೆತೆಯುಳ್ಳ ರಾಗಿಯನ್ನು ಧಾನ್ಯವಾಗಿಯೂ ಹಿಟ್ಟಾಗಿಯೂ ಬಳಸುವ ರೂಢಿಯಲ್ಲಿದೆ. ರಾಗಿಯನ್ನು ಧಾನ್ಯವಾಗಿ ಹಾಗೂ ರಾಗಿ ಹಿಟ್ಟನ್ನು ಬಳಸಿ ತಿನಿಸುಗಳನ್ನು ಹೇಗೆ ಆರೋಗ್ಯಕರವಾಗಿ ಹಾಗೂ ಹೆಚ್ಚು ರುಚಿಕರವಾಗಿ ಅಡುಗೆ ಮಾಡಬಹುದು ಎಂಬುದನ್ನು ಈ ಕೃತಿಯು ತಿಳಿಸಿ ಕೊಡುತ್ತದೆ.
©2024 Book Brahma Private Limited.