ʻಗೌರಿ ಅಮ್ಮನ ಆರೋಗ್ಯಕರ ಅಡುಗೆಗಳು ಭಾಗ-2ʼ ಇದು ಲೇಖಕಿ ಡಾ. ಗೌರಿ ಸುಬ್ರಹ್ಮಣ್ಯ ಅವರು ಬರೆದ ಕೃತಿಯಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ ಸಿಹಿ ಕಹಿ ಚಂದ್ರು ಅವರು, “ ಶ್ರೀಮತಿ ಗೌರಿ ಅಮ್ಮ ಒಂದು ಜ್ಞಾನ ಭಂಡಾರ. ಆಯುರ್ವೇದವನ್ನ ಕರಗತ ಮಾಡಿಕೊಂಡಿರುವ ಗೌರಿ ಅಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಸುಲಭವಾದ ಮನೆಮದ್ದನ್ನು ತಿಳಿಸುವುದರಲ್ಲಿ ನಿಸ್ಸೀಮರು. ಇವರು ಸೂಚಿಸಿದ ಅನೇಕ ಮನೆ ಮದ್ದುಗಳ ಲಾಭ ಪಡೆದುಕೊಂಡವರು ಹಲವರು. ಅಮ್ಮನ ವೈಶಿಷ್ಟ್ಯವೆಂದರೆ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿರುವ ಔಷಧೀಯ ಗುಣಗಳನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ತಿಳಿಹೇಳುತ್ತಾರೆ. ಗೌರಿ ಅಮ್ಮ ಕೊಡುವ ಸಲಹೆ ಪಾಲಿಸಿದರೆ ನಮ್ಮ ಆರೋಗ್ಯ ಅಭಿವೃದ್ಧಿ ಆಗುವುದರಲ್ಲಿ ಅನುಮಾನವೇ ಇಲ್ಲ” ಎಂದು ಹೇಳಿದ್ದಾರೆ.
©2025 Book Brahma Private Limited.