ಆಹಾರ ತಯಾರಿಕೆ ಕ್ಷೇತ್ರದ ಉದ್ಯಮಿ ಹಾಗೂ ಲೇಖಕ ಡಾ. ಪಿ. ಸದಾನಂದ ಮಯ್ಯ ಅವರ ಕೃತಿ-ಆಹಾರ ವಿಹಾರ ಭಾಗ-2. ಕೃತಿಗೆ ಮುನ್ನುಡಿ ಬರೆದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ‘ಆಹಾರ ವಿಹಾರ ಕುರಿತು ವಿಜಯಕರ್ನಾಟಕ ಪತ್ರಿಕೆಯಲ್ಲಿ ಡಾ. ಪಿ. ಸಾದಾನಂದ ಮಯ್ಯ ಅವರು ತಮ್ಮ ಅಂಕಣದಲ್ಲಿ ಬರೆಯುತ್ತಿದ್ದಾಗ ‘ಅವರು ಏನು ಬರೆಯುತ್ತಾರೆ? ಆಹಾರ ಹೇಗೆ ವಿಹಾರ? ಎಂದು ಮತ್ತು ಇದು ಬರೀ ಶಬ್ದಾಡಂಬರವೋ, ವೈವಿಧ್ಯಮಯ, ರುಚಿ, ಚೊಕ್ಕತನ ಇಲ್ಲೂ ಪಾಕ ಪ್ರಪಂಚದ ಅರಿವು ಇರಲು ಸಾಧ್ಯವೆ? ಎಂದು ಶಂಕಿಸಿದ್ದವರಲ್ಲಿ ನಾನೂ ಒಬ್ಬ. ಒಬ್ಬನೇನು? ಮುಖ್ಯ ಎಂದರೂ ಸರಿ. ತಪ್ಪು ಒಪ್ಪಿಕೊಳ್ಳಲು ನನಗೆ ಸಂಕೋಚವಿಲ್ಲ’ ಎನ್ನುವ ಮೂಲಕ ಇಲ್ಲಿಯ ಬರಹಗಳ ಸ್ವರೂಪ ಹಾಗೂ ವಿಷಯದ ಆಳವನ್ನು ಪ್ರಶಂಸಿಸಿದ್ದಾರೆ.
ಪತ್ರಕರ್ತ ವಿಶ್ವೇಶ್ವರ ಭಟ್ ಕೃತಿಗೆ ಬೆನ್ನುಡಿ ಬರೆದು ‘ಆಹಾರ ತಯಾರಿಕೆಯಲ್ಲಿ ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಮಯ್ಯ ಮಾಡಿದ್ದಾರೆ. ಇದೊಂದನ್ನು ನೀವು ಮಾಡಿಲ್ಲ ಅಂತ ಅವರಿಗೆ ಹೇಳುವಂತಿಲ್ಲ. ಅಡುಗೆ ಮನೆಯಲ್ಲೊಂದು ಕ್ರಾಂತಿಯನ್ನೇ ಮಾಡಿದ್ದಾರೆ’ ಇಲ್ಲಿಯ ಅಂಕಣ ಬರಹಗಳ ರುಚಿ ಓದಿಯೇ ಸವಿಯಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.