ವಿಮರ್ಶಕ -ಲೇಖಕ ಪ್ರೊ. ಜಿ.ಎಸ್. ಆಮೂರ ಅವರ ಕೃತಿ-ಶ್ರೀಮದ್ಭಗವದ್ಗೀತೆ ಶ್ರೀಕೃಷ್ಣನ ಯೋಗಶಾಸ್ತ್ರ. ಭಗವದ್ಗೀತೆಯು ಜಗತ್ತಿನ ಮಹಾಕಾವ್ಯಗಳಲ್ಲಿ ಕಾವ್ಯದ ಸ್ವರೂಪ, ಸಾರ, ಅರ್ಥವಂತಿಕೆ, ಸಂದೇಶ ಹೀಗೆ ವಿವಿಧ ಅಂಶಗಳಿಂದ ಶ್ರೇಷ್ಠವಾದದ್ದು. ಭಗವದ್ಗೀತೆಯ ಸೂತ್ರಧಾರಿ ಶ್ರೀಕೃಷ್ಣ. ಯುದ್ಧಭೂಮಿಯಲ್ಲಿ ಅರ್ಜುನನಿಗೆ ಬದುಕಿನ ಮೌಲ್ಯಗಳು ಹಾಗೂ ಅವುಗಳ ಸಮಯಾನುಸಾರದ ಅನ್ವಯತೆ, ಆದರ್ಶ ಹಾಗೂ ವಾಸ್ತವತೆಗಳ ನಡುವಿನ ವ್ಯತ್ಯಾಸ ಹೀಗೆ ಜೀವನ ಸಂದೇಶಗಳನ್ನು ಬೋಧಿಸಿದ್ದು, ಸರ್ವಕಾಲಕ್ಕೂ ಸರ್ವ ಗಡಿಗಳ ಮಿತಿಗೆ ಒಳಪಡದಂತೆ ಅನ್ವಯವಾಗುತ್ತವೆ. ಗೀತೆಯ ಪ್ರಮುಖ ಭಾಗವಾಗಿ ಯೋಗಶಾಸ್ತ್ರವಿದೆ. ಯೋಗದ ಮಹತ್ವವನ್ನೂ ಲೇಖಕರು ಕಾಣಿಸಿದ್ದು, ಯೋಗವು ಧಾರ್ಮಿಕ ದೃಷ್ಟಿಯಿಂದ ನೋಡಬಾರದು ಎಂಬ ಸೂಕ್ಷ್ಮ ಸಂದೇಶವನ್ನು ಲೇಖಕರು ಸ್ಪಷ್ಟವಾಗಿಸಿದ್ದಾರೆ.
©2024 Book Brahma Private Limited.