ಯುವ ಜನತೆಯ ವ್ಯಕ್ತಿತ್ವ ನಿರ್ಮಾಣಕ್ಕೊಂದು ಕೈಪಿಡಿ ಎಂಬ ಉಪಶೀರ್ಷಿಕೆಯಡಿ ಸ್ವಾಮಿ ಪುರುಷೋತ್ತಮಾನಂದರು ‘ಯಶಸ್ಸಿನ ರಹಸ್ಯ’ ಎಂಬ ಕೃತಿ ರಚಿಸಿದ್ದು, ಯುವ ಜನತೆಗೆ ಮಾರ್ಗದರ್ಶಿಯಂತಿದೆ. ಯುವಕರು ತಮ್ಮ ವಯಸ್ಸಿನ ಹುಚ್ಚುಹೊಳೆಯಲ್ಲಿ ದಾರಿ ತಪ್ಪುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿರುತ್ತದೆ. ಅದನ್ನು ಪಾಲಕ-ಪೋಷಕರು-ಶಿಕ್ಷಕರು ಅಗತ್ಯವಾಗಿ ನೀಡಬೇಕು. ತಪ್ಪಿದರೆ, ಅವರ ಜೀವನವೇ ವ್ಯರ್ಥ ದಾರಿ ತುಳಿದು ಹಾಳಾಗುತ್ತದೆ. ಆದ್ದರಿಂದ, ಸ್ವಾಮಿ ವಿವೇಕಾನಂದರ ಜೀವನ ತತ್ವಗಳನ್ನು ಅನುಸರಿಸಿ, ಜೀವನ ಯಶಸ್ಸು ಗಳಿಸಬೇಕು ಎಂಬ ಸಂದೇಶ ನೀಡುವ ಕೃತಿ ಇದು.
©2025 Book Brahma Private Limited.