ಶೂದ್ರ ದಾರ್ಶನಿಕರು-ಕೃತಿಯಲ್ಲಿ ನಾಲ್ಕು ಭಾಗಗಳಿದ್ದು ಮೊದಲ ಭಾಗದಲ್ಲಿ ಬುದ್ಧ, ಬಸವ, ಮಹಾವೀರ, ಯೇಸು, ಪೈಗಂಬರ್, ಅಕ್ಕ, ಕನಕ, ಪುರಂದರ, ಗಾಂಧಿ, ಅಂಬೇಡ್ಕರ್- ಅವರೆಲ್ಲರ ಜೀವನ ಬೋಧನೆ, ಹೋರಾಟಗಳನ್ನು ತೆರೆದಿಡುವ ಹಂಬಲ ಈ ಕೃತಿಯದ್ದು. ಮುಂದೊಂದು ದಿನ ಶೂದ್ರ ಚಿಂತನೆಗಳೇ ಸಮಾಜದಲ್ಲಿ ಸಮನಾಗಿ ನಿಲ್ಲುತ್ತದೆ : ನಿಲ್ಲಬೇಕೆಂಬ ಆಶಯವೂ ಇದರೊಳಗಿದೆ. ಸರ್ವಸಮಾನತಾವಾದ, ಜಾತ್ಯತೀತವಾದ, ಸ್ತ್ರೀಹಕ್ಕುಗಳು, ಅಹಿಂಸಾತತ್ವ, ಸರಳ ಜೀವನ, ವಿಶ್ವಕಲ್ಯಾಣ, ಮಾನವೀಯತೆ, ಮೂಢನಂಬಿಕೆ ನಿರ್ಮೂಲನೆ ಇಲ್ಲಿ ಒರೆಗೆ ಹಚ್ಚಲಾಗಿದೆ. ಭಾಗ -2ರಲ್ಲಿ ವರ್ಣ ವ್ಯವಸ್ಥೆ ಮತ್ತು ದಾರ್ಶನಿಕರು, ವರ್ಣ ವ್ಯವಸ್ಥೆ ವಿರುದ್ಧ ಸ್ತ್ರೀ ಚಳವಳಿಯನ್ನು ತೆರೆದಿಡಲಾಗಿದೆ. ಭಾಗ-3 ರಲ್ಲಿ ಕಲ್ಯಾಣ ಕ್ರಾಂತಿಯ ಕಿಡಿ, ಶತಶತಮಾನಗಳ ಅಲೆ ಗೌತಮ ಬುದ್ಧರು, ದಾರ್ಶನಿಕ ಜ್ಯೋತಿ ಮಹಾವೀರರು, ಯೇಸು ಎಂಬ ಮಹಾ ಬೆಳಕು, ಮನುಕುಲದ ಮಹಾ ಮಾನವತಾವಾದಿ ಪೈಗಂಬರ್, ಸ್ವಾತಂತ್ರ್ಯದ ಯುಗಪುರುಷ ಗಾಂಧೀಜಿ, ಸಮಾನತೆಯ ಹರಿಕಾರ ಅಂಬೇಡ್ಕರ್ ಕುರಿತಂತೆ ವ್ಯಾಖ್ಯಾನಿಸಲಾಗಿದೆ. ಭಾಗ -4ರಲ್ಲಿ ಶೂದ್ರ ದಾರ್ಶನಿಕರು ಮತ್ತು ಪ್ರಸ್ತುತತೆ, ಪರಿಹಾರೋಪಾಯಗಳು ಕುರಿತಂತೆ ಹೇಳಲಾಗಿದೆ. ಒಟ್ಟು ಶೂದ್ರ ದಾರ್ಶನಿಕರು-ಈ ಕೃತಿಯು ಸಮಾನತೆಯ ಬಾಗಿಲು ತೆರೆಯುವಲ್ಲಿ ದಾರಿದೀಪವಾಗಲಿದೆ.
©2025 Book Brahma Private Limited.