ಚಿಂತಕ ಪಂಡಿತ ತಾರಾನಾಥರು ಬರೆದ ಗ್ರಂಥ-ಧರ್ಮ ಸಂಭವ. ಈ ಗ್ರಂಥವು ಅವರನ್ನು ಉತ್ತಮ ಚಿಂತಕರ ಸಾಲಿನಲ್ಲಿ ನಿಲ್ಲಿಸಿದೆ. ಧರ್ಮದ ಬಗ್ಗೆ ಖಚಿತವಾದ ವ್ಯಾಖ್ಯಾನಗಳು, ಅದರ ಸಮರ್ಥ ವಿವರಣೆ, ದುರುಪಯೋಗದ ಸಾಧ್ಯತೆ ಕುರಿತ ಅವರ ದೂರದೃಷ್ಟಿ ಎಲ್ಲವನ್ನೂ ಒಳಗೊಂಡ ಗಂಭೀರ ಕೃತಿ.
ನಿಷ್ಠುರವಾದಿಯಾಗೇ ಬದುಕಿದ್ದ ಅವರು ಬರೆಹದಲ್ಲೂ ನಿಷ್ಠುರವಾದಿಗಳು ಎಂಬುದನ್ನು ಧರ್ಮ ಸಂಭವ ಗ್ರಂಥ ಕನ್ನಡಿ ಹಿಡಿಯುತ್ತದೆ. ಜ್ಞಾನವು ಒಂದು ಧರ್ಮ ಪ್ರತಿಪಾದಿಸಿದರೆ ಅಜ್ಞಾನವೂ ತನ್ನ ಸ್ವಾರ್ಥಕ್ಕಾಗಿ ಮತ್ತೊಂದು ಧರ್ಮವನ್ನು ಸೃಷ್ಟಿಸಿಕೊಂಡಿದೆ. ಈ ಎರಡರ ಮಧ್ಯೆ ಸಂಘರ್ಷದ ಫಲವಾಗಿ ಘರ್ಷಣೆಗಳು ಸಂಭವಿಸುತ್ತಿವೆ ಎಂಬುದು ಪಂಡಿತ ತಾರಾನಾಥರ ಸರಳ ಸಮರ್ಥನೆಯಾಗಿದೆ. ವಿಚಾರ ವಿಪ್ಲವ,ಮತವೋ ಸತ್ಯವೋ, ದೇವರ ಮೊದಲು ತೊದಲು, ನಿಸರ್ಗ ಮತ್ತು ಕೃತ್ರಿಮತೆ, ಸಹಜ ಸಮರಸ ಹೀಗೆ ಒಟ್ಟು ಏಳು ಅಧ್ಯಾಯಗಳು ಧರ್ಮದಂತಹ ವಿಷಯವನ್ನು ತುಂಬಾ ಗಂಭೀರವಾಗಿ ಚರ್ಚಿಸುತ್ತವೆ. ಇಲ್ಲಿಯ ಶೈಲಿ ತುಂಬಾ ಪ್ರಭಾವಿತವಾಗಿದೆ. ವಿಷಯ ಮಂಡನೆಯೂ ಅತ್ಯಂತ ತರ್ಕಬದ್ಧ ಹಾಗೂ ಸತ್ಯದ ಪ್ರತಿಪಾದನೆಯಾಗಿ ಅದರ ವಿರಾಟ ಸ್ವರೂಪವನ್ನು ಓದುಗರಲ್ಲಿ ಮನದಟ್ಟು ಮಾಡುತ್ತದೆ.
©2025 Book Brahma Private Limited.