ಹಿರಿಯ ವಿದ್ವಾಂಸ ತಿ.ನಾ. ರಾಘವೇಂದ್ರ ಅವರು ರಚಿಸಿದ ಕೃತಿ-ಶ್ರೀಕೃಷ್ಣ ಗೀತ. ಶ್ರೀಕೃಷ್ಣನು ಹಿಂದೂಗಳ ಬದುಕಿನಲ್ಲಿ ಆರಾಧ್ಯ ದೈವ. ಆತನ ಉಪದೇಶ, ಸಲಹೆ, ಸೂಚನೆಗಳ, ಜೀವನ ಮಾರ್ಗ-ನೀತಿಗಳ ಭಗವದ್ಗೀತೆಯು ವಿಶ್ವಮನ್ನಣೆ ಪಡೆದಿದೆ. ಬದುಕಿನ ಪ್ರತಿ ಆಯಾಮವನ್ನು ಈ ಭಗವದ್ಗೀತೆಯು ದರ್ಶಿಸುತ್ತದೆ. ಶ್ರೀಕೃಷ್ಣನ ಅವತಾರ, ಭೂಮಿಯ ಮೇಲಿನ ಆತನ ಲೀಲೆಗಳು, ಆತನ ಬೋಧೆಗಳ ಕುರಿತು ವಿಸ್ತೃತ ವಿವರಣೆಯೊಂದಿಗೆ ರಚಿಸಿದ ಕೃತಿ ಇದು.
ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...
READ MORE