ಭಗವದ್ಗೀತೆಯ ಬೆಳಕಿನಲ್ಲಿ ವೈಯಕ್ತಿಕ ಉತ್ಕೃಷ್ಟತೆ-ಈ ಕೃತಿಯನ್ನು ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದು, ವ್ಯಕ್ತಿಗತ ವಿಕಾಸವು ಭಗವದ್ಗೀತೆಯ ಸಂದೇಶಗಳ ಪಾಲನೆಯಲ್ಲಿದೆ ಎಂಬುದನ್ನು ತರ್ಕಿಸಿ, ಸಮರ್ಥಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಹೆಚ್ಚು ಓದುಗರ ಗಮನ ಸೆಳೆದಿರುವ ಈ ಕೃತಿಯು , ಭಗವದ್ಗೀತೆಯು ಕೇವಲ ಗ್ರಂಥವಲ್ಲ; ಅದು ವ್ಯಕ್ತಿಯನ್ನು ಅಧ್ಯಾತ್ಮಿಕ ವಿಕಾಸದತ್ತ ಕೊಂಡೊಯ್ಯುತ್ತದೆ. ಭೌತಿಕ ಬದುಕಿನ ಸ್ವರೂಪವನ್ನು ತಿಳಿಸುತ್ತಲೇ ಅಲೌಕಿಕ ಬದುಕಿನ ಮಹತ್ವವನ್ನು ಸಾರುತ್ತದೆ. ಅಲೌಕಿಕ-ಲೌಕಿಕ _ಈ ಎರಡರ ಸಮನ್ವಯದ ಜೀವನ ಸಂದೇಶವೂ ಇಲ್ಲಿದೆ. ಸಾಮ್ಯತೆ-ವೈರುಧ್ಯ ಎರಡನ್ನೂ ಹೊಂದಿರುವ ಈ ಗ್ರಂಥ, ವ್ಯಕ್ತಿಯ ಬದುಕಿನ ಉತ್ಕೃಷ್ಟತೆಯನ್ನು ತಿಳಿ ಹೇಳುತ್ತದೆ ಎಂಬ ವಿಚಾರಗ:ಳು ಇಲ್ಲಿ ಮಂಡನೆಯಾಗಿವೆ.
©2024 Book Brahma Private Limited.