ಚಿಂತಕ ತಿ.ನಾ. ರಾಘವೇಂದ್ರ ಅವರ ಅಧ್ಯಯನಪೂರ್ಣ ಕೃತಿ-ಯಜುರ್ವೇದ ಸಾರ. ಯಾರಿಗೆ ಸತ್ಯ- ಧರ್ಮ - ನ್ಯಾಯ ಸಮಾನತೆಯಲ್ಲಿ ಆಸಕ್ತಿ, ಯಾರಿಗೆ ಜೀವನವನ್ನು ಸಂತೋಷಮಯವನ್ನಾಗಿ ಮಾಡಬೇಕೆಂಬ ಧ್ಯೇಯ, ಯಾರಿಗೆ ತಮ್ಮ ದೈವತ್ವದ ಜ್ನ್ಯಾನವನ್ನು ಹೊಂದುವ ಆಸೆಯಿದೆಯೊ , ಅವರಿಗೆ ಈ ಯಜುರ್ವೇದ ಸಾರದ ಅಗತ್ಯವಿದೆ ಎಂದು ಹೇಳಬಹುದು. ವೇದಗಳು ಜ್ಞಾನ ಮತ್ತು ಶಕ್ತಿಯನ್ನು ವ್ಯಕ್ತಿಗಳಲ್ಲಿ ತುಂಬುವ ವಾಹಕ ಮಂತ್ರಗಳು. ಈ ಮಂತ್ರಗಳ ಅರ್ಥವನ್ನುಸರಳವಾಗಿ ವಿವರಿಸಿದ್ದು ಈ ಕೃತಿಯ ವೈಶಿಷ್ಟ್ಯ. .
ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...
READ MORE