ವಿವಿಧ ಲೇಖಕರು ಸೇರಿ ಸ್ವಾಮಿ ವಿವೇಕಾನಂದರ ಬದುಕಿನಲ್ಲಿಯ ಮಹತ್ವದ ಘಟನೆ, ರೋಮಾಂಚಕಾರಿ ಪ್ರಸಂಗಗಳು ಹಾಗೂ ಬದುಕನ್ನು ಪ್ರೀತಿಸಲು ಅವರ ಚಿಂತನೆಗಳನ್ನು ಕ್ರೋಢಿಕರಿಸಿದ ಕೃತಿ-ಎಚ್ಚೆತ್ತ ಚೇತನ. ಸ್ವಾಮಿ ವಿವೇಕಾನಂದರು ಯುಜನತೆಯಲ್ಲಿ ಸಾಕಷ್ಟು ವಿಶ್ವಾಸ ಇರಿಸಿದವರು. ಅವರಿಂದ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಬದಲಾವಣೆ ತರಲು ಸಾಧ್ಯವಾದರೆ ಅದು ಯುವಕರಿಂದ ಮಾತ್ರ ಸಾಧ್ಯ ಎಂದು ನಂಬಿದವರು. ಎಚ್ಚೆತ್ತ ಚೇತನ ಶೀರ್ಷಿಕೆಯು, ಜಾತಿ ಮತ ಧರ್ಮಗಳಿಂದ ಅಂಧರಾದ ಸಮೂಹವನ್ನು ಸ್ವಾಮಿ ವಿವೇಕಾನಂದರ ವಿಚಾರಗಳು ಎಚ್ಚರಿಸುತ್ತವೆ. ಇಂತಹ ಚಾಲನಾಶಕ್ತಿಯ ಸಂಕೇತವಾಗಿ ‘ಎಚ್ಚೆತ್ತ ಚೇತನ’ ಕೃತಿ ರೂಪುಗೊಳಿಸಲಾಗಿದೆ.
©2025 Book Brahma Private Limited.