ಆಲೂರು ವೆಂಕಟರಾಯರು ಭಗವದ್ಗೀತೆ ಕುರಿತು ಬರೆದ ಕೃತಿ- ಗೀತಾ ಪರಿಮಳ. ಲೇಖಕರದ್ದೇ ಆದ ಗೀತ ಕುಸುಮ ಮಂಜರಿ ಗ್ರಂಥಮಾಲೆಯಡಿ ಗೀತೆಗೆ ಸಂಬಂಧಿಸಿದ ವಿವಿಧ ಕೃತಿಗಳನ್ನು ಪ್ರಕಟಿಸಿದ್ದು, ಆ ಪೈಕಿ ‘ಗೀತಾ ಪರಿಮಳ’ ವೂ ಒಂದು. ಕೃತಿಯಲ್ಲಿ ರಣ ಕೋಲಾಹಲ-ಮನ ಕೋಲಾಹಲ, ಶ್ರೀ ಕೃಷ್ಣನ ಉತ್ತರ, ಈ ವಿಷಾದಕ್ಕೂ ನಮಗೂ ಸಂಬಂಧವೇನು?, ಇಂತಹ ವಿಚಾರಗಳನ್ನುಕೇಂದ್ರೀಕರಿಸಿ ಓದುಗರ ಸಂಶಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಳವಾಗಿ ಬರೆದ ಕೃತಿ ಇದು.
ದಾಸರು, ಶರಣರು, ಜೈನ ಮುನಿಗಳ ಸಂದೇಶವೂ ಗೀತೆಯೊಂದಿಗೆ ಹೋಲುವ ರೀತಿಯನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ. ಗೀತೆಯ ವಿವೇಚನಾ ಪದ್ಧತಿ, ಮಹಾಭಾರತದ ಮಹತ್ವ; ಅದರಲ್ಲಿ ಗೀತೆಯ ಸ್ಥಾನ, ಕರ್ಮಯೋಗದ ತಿರುಳು, ಸನ್ಯಾಸವೂ- ಯೋಗವು, ಪರಮಾತ್ಮನ ವಿಭೂತಿಗಳು, ಸಂಸಾರವು ಸೆರೆಮನೆಯಲ್ಲ; ಸಾಧನ ಕ್ಷೇತ್ರ ಹೀಗೆ ವಿಷಯಗಳನ್ನು ವಿನೂತನ ದೃಷ್ಟಿಯಲ್ಲಿ ಚಿಂತನೆ ನಡೆಸಿದ್ದೇ ಈ ಕೃತಿಯ ಹೆಗ್ಗಳಿಕೆ ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.