ಭಾಗವತವು ಭಕ್ತಿ ಪೂರ್ಣವಾದ ಗ್ರಂಥ. ಭಕ್ತಿ ಇಲ್ಲದವರೂ ಭಕ್ತರಾಗುತ್ತಾರೆ. ಅಂತಹ ಅರ್ಥಗರ್ಭಿತ ಕಥೆಗಳನ್ನು ಒಳಗೊಂಡಿದೆ. ಭಕ್ತ ಪ್ರಹ್ಲಾದನ ಕಥೆ ಇದರಲ್ಲಿ ಅತ್ಯಂತ ಪ್ರಭಾವಶಾಲಿ. ಭಾಗವತದಲ್ಲಿ ವೇದಾಂತ ಶಾಸ್ತ್ರವೂ ಇದೆ. ಭಾಗವತವು ವಿಷ್ಣುವಿನ ಹಾಗೂ ಶ್ರೀಕೃಷ್ಣನ ವಿರಾಟ ಸ್ವರೂಪವನ್ನು ತಿಳಿಸುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಚಿತ್ರಗಳು ಇದ್ದು, ಗ್ರಂಥದ ಆಕರ್ಷಣೆ ಹಾಗೂ ಪರಿಣಾಮಕತೆಯನ್ನು ಹೆಚ್ಚಿಸಿದೆ.
ಭಾಗವತ ಎಂದರೇನು?, ಭಾಗವತ ಹರಡಿದುದು, ಹಿರಣ್ಯಾಕ್ಷನ ವೃತ್ತಾಂತ, ಮನುವಂಶದ ಕಥೆ, ಧ್ರುವ ಚರಿತ್ರೆ, ಭರತ ಚರಿತ್ರೆ, ನಾರದರಿಗೆ ಶಾಪ ಬಂದುದು, ಭಾಗವತರೂ, ಭಾಗವತ ಧರ್ಮವೂ , ಸಮುದ್ರ ಮಥನ, ವಾಮನಾವತಾರ, ಬೃಂದಾವನ ಲೀಲೆ, ರಾಮಕೃಷ್ಣರು ಮಧುರೆಗೆ ಹೋಗುವುದು, ಯಾದವ ನಾಶ ಹೀಗೆ ವಿವಿಧ ಅಧ್ಯಾಯಗಳಡಿ ಇಡೀ ಭಾಗವತವನ್ನು ವಿವರಿಸಲು ಈ ಕೃತಿಯಲ್ಲಿ ಯತ್ನಿಸಲಾಗಿದೆ.
©2025 Book Brahma Private Limited.