ಭಾರತೀಯ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ-ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ. ಜೀವನ ಹೂವಿನ ಹಾಸಿಗೆಲ್ಲ. ಅದು ಮುಳ್ಳುಗಳ ರಾಶಿಯೂ ಆಗಿದೆ. ಆದ್ದರಿಂದ, ದುಃಖ ಬಂದಾಗ ಕುಗ್ಗದೇ ಮುನ್ನುಗ್ಗಬೇಕು. ಸಂಕಷ್ಮಯ ಸ್ಥಿತಿಯಲ್ಲೇ ಮನುಷ್ಯ ಬದುಕಿನ ಎಲ್ಲ ಪಾಠಗಳನ್ನು ಕಲಿಯುತ್ತಾನೆ. ಇಂತಹ ಮನಸ್ಥಿತಿಯನ್ನು ಆತ ಬೆಳೆಸಿಕೊಳ್ಳಲೇ ಬೇಕು. ದುಃಖಗಳು ಬಂದಾಗ ಪಲಾಯನ ಮಾಡಬಾರದು. ಅವುಗಳನ್ನು ಎದುರಿಸಬೇಕು. ತಪ್ಪಿದರೆ, ಅವು ನಮ್ಮ ಬೆನ್ನು ಬಿಡಲಾರವು. ಇಂತಹ ಪ್ರೇರಣಾತ್ಮಕ ಸಲಹೆ ಸೂಚನೆ-ಉಪದೇಶಗಳು ಈ ಕೃತಿಯಲ್ಲಿ ಒಳಗೊಂಡಿವೆ.
©2024 Book Brahma Private Limited.