25 ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ರಚಿತವಾದ ಕೃತಿ-ಬುದ್ಧ ಅನುಶಾಸನ. ಕರ್ತೃ ಸಿ.ಎಚ್. ರಾಜಶೇಖರ. ಮಿಥ್ಯ ದೃಷ್ಟಿಯಿಂದ ಬಿಡುಗಡೆ ಹೊಂದುವ ಬಗ್ಗೆ ಬುದ್ಧನ ಸಂದೇಶಗಳನ್ನು ಇಲ್ಲಿ ಸಂಕಲಿಸಲಾಗಿದೆ. ಉತ್ತಮ ಮಾರ್ಗವನ್ನು ಅನುಸರಿಸಿದರೆ ಉತ್ತಮ ಫಲ ಪಡೆಯಬಹುದು ಎಂಬುದು ಇಲ್ಲಿಯ ಬೋಧೆಗಳ ಜೀವಾಳವಾಗಿವೆ. ಈ ಕೃತಿಯಲ್ಲಿನ 36 ಶೀರ್ಷಿಕೆಗಳು ಹೀಗಿವೆ; ಕುರಿಯು ಬಂದಿತು ನಾಯಿಗಳೊಂದಿಗೆ, ಹುಲ್ಲಿಯು ಕೊಂದಿತು ಆ ಪಾಪಿಯ, ತಲೆಯ ಮೇಲಣ ಪಾಪಚಕ್ರ ನಿಲ್ಲುವುದೆಂದು, ವರವ ಕೊಡಲೋಗಿ ವರ ಪಡೆದು ವಿಭಾಂತನಾದ, ಕೊಟ್ಟ ದಾನ ಇಟ್ಟ ಅನ್ನಕ್ಕೆ ಚ್ಯುತಿಯುಂಟೇ, ಕಾಮುಕ ರಾಜ ಭಿಕ್ಷುಣಿಯ ಕರೆದೊಯ್ದ ಆದರೆ, ರಾಜಾ ಪೂರ್ಣ ಸತ್ಯ ಎಂದರೆ ಹೇಗಿರುತ್ತದೆ, ದುಷ್ಟಂಗೆ ಉಪಕಾರ ಬೇಕಿಯಲ್ಲಿ ಬಿತ್ತಿದ ಬೀಜ, ಇದೇ ಸರ್ವ ಧರ್ಮಗಳ ಮೂಲಭೂತ ಸಾರ, ಕಲ್ಮಷಗಳ ಹೀಗೆ ನೀಗಿಕೊಳ್ಳಿ, ಧರ್ಮಕ್ಕೆ ನಾವೇಕೆ ಬಾಧ್ಯಸ್ತರಾಗಬೇಕು, ಬೋಧಿಸತ್ವರು ಕಾಡಿನ ಭಯ ನೀಗಿ ಬುದ್ಧರಾದ ಪರಿ, ಕಳಂಕವೇ. ಪಾಪ ಹೀಗೆ ದಾಟಿರೆಂದರು ಬುದ್ಧ, ಸಚ್ಚಾರಿತ್ರ್ಯದ ನಡೆಯೇ ಸಕಲ ಯಶಸ್ಸಿನ ಮೂಲ, ಚಿತ್ರಕಲ್ಮಷದಿಂದಲೇ ದುರ್ಗತಿ ನೀಗಿಕೊಳ್ಳಿರಿ ಹೀಗೆ, ಬುದ್ಧ ಅನುಶಾಸನ ಮಿಥ್ಯಾದೃಷ್ಟಿಯ ಬಿಡುಗಡೆ, ಬುದ್ಧ ಹೀಗೆ ಪಳಗಿಸುತ್ತಿದ್ದರು ಭಿಕ್ಷುಗಳು, ಇದೇ ಬಂಧನದಿಂದ ಬಿಡುಗಡೆಯ ಮಾರ್ಗ, ಬುದ್ಧ ದೇವಮಾನವರ ಹಿತಕ್ಕಾಗಿ ಸುಖಕ್ಕಾಗಿ ಜನಿಸಿದ ಮಹಾನುಭಾವರು, ದುಃಖ ಸಮಾನಾಂತರ ತಥಾಗತರಿಂದಷ್ಟೇ ಪರಿಹಾರ, ಸಕಲ ಸುಖಕ್ಕೂ ಮಿಗಿಲು ಧರ್ಮಶಾಂತಿ, ಪಾಪ ಮತ್ತು ಪಾಪಿಗಳಿಂದ ಬಿಡುಗಡೆಯೇ ಉನ್ನತಿ, ಅಷ್ಟಾಂಗ ಮಾರ್ಗದ ಆಚರಣೆಯಿಂದಲೇ ದುಃಖ ದೂರ, ವಿಪಶ್ಯನ ಧ್ಯಾನದಿಂದಲೇ ಚಿತ್ತವಿಮುಕ್ತಿ, ಕಾಯದೆಚ್ಚರ ಸ್ಥಿತಿಯಿಂದ ಪಡೆಯಿರಿ ಹತ್ತು ಮಹಾಫಲ, ಧ್ಯಾನದಿಂದಲೇ ಅಂತಿಮ ಜ್ಞಾನ ಅರಿತು ಮುನ್ನಡೆಯಿರಿ, ಧ್ಯಾನಿಸಿ ತಡ ಮಾಡಿದೊಡೆ ಪರಿತಾಪ ತಪ್ಪದು, ವಿಪಶ್ಯನ ಧ್ಯಾನದಿಂದ ಸಾರಿಸುತ್ತ ಅರಹಂತರಾದ ಪರಿ, ರಾಹುಲ ಧ್ಯಾನದಿಂದ ಕರ್ಮ ಅರಿತವನೇ ಧರ್ಮ ವಿಚೇತನೆಂದರು ಬುದ್ಧ, ರಾಹುಲ ಧ್ಯಾನದಿಂದಲೇ ವಿಮುಕ್ತಿ ವೃದ್ಧಿಸೆಂದರು ಬುದ್ಧ, ಬ್ರಾಹ್ಮಣ ಧರ್ಮಹೀನನಾದೊಡೆ ಶ್ರೇಷ್ಠನೋ? ಸಾಮಾನ್ಯ ಚೋರನೋ, ವರ್ಣಸಂಕರ ದ್ವೇಷವ ಹೀಗೆ ದಾಟಿರೆಂದರಾ ಬುದ್ಧ, ಬ್ರಾಹ್ಮಣರು ಹೀಗೆ ಶ್ರೇಷ್ಠರಾದರು ಬ್ರಹ್ಮನಿಂದಲ್ಲ ಕುಹಕದಿಂದ ಎಂದರಾ ಬುದ್ಧರು, ಏಸುಕಾರಿಯೇ ಇತರರೇಕೆ ಬ್ರಾಹ್ಮಣರ ಸೇವೆಗೆ ಮೀಸಲು, ಬ್ರಾಹ್ಮಣರು ಎಂದರೆ ಏನು? ಯಾರು ಬ್ರಾಹ್ಮಣರು, ಬ್ರಾಹ್ಮಣರಲ್ಲಿಯೇ ಒಬ್ಬ ಬ್ರಾಹ್ಮಣನಾದರೂ ಸತ್ಯ ಕಂಡಿರುವನೇ.
©2024 Book Brahma Private Limited.