ಲೇಖಕ ಟಿ.ಎನ್. ವಾಸುದೇವ ಮೂರ್ತಿ ಅವರ ಕೃತಿ-ಬುದ್ಧ ಮತ್ತು ಪರಂಪರೆ. ಅಲೌಕಿಕ ಅರಿವಿನ ವಿವರಣೆ ಇಲ್ಲಿದೆ. ಬೆಳಕಿನ ನುಡಿಗಳಲ್ಲಿ ಬುದ್ಧನನ್ನು ಹೊಸದಾಗಿ ಕಾಣಿಸಲಾಗಿದೆ. ಜಗತ್ತಿನಲ್ಲಿ - ಆದಿಶಂಕರನಿಂದ ಹಿಡಿದು ನಮ್ಮ ಕಾಲದ ಯುಜಿ ತನಕ - ಅವತರಿಸಿರುವ ಪ್ರತಿಯೊಬ್ಬ ಅನುಭಾವಿಯ ನುಡಿಗಳಲ್ಲೂ ಬುದ್ಧನ ವಿವೇಕವೇ ಪ್ರತೀತವಾಗುವುದಾದರೂ ಇಂದಿನತನಕ ಯಾವ ಆತ್ಮಾನುಭವಿಯೂ ಬುದ್ಧ ಮತ್ತು ಅವನ ಪರಂಪರೆಯನ್ನು ಕುರಿತು ಇಷ್ಟೊಂದು ವ್ಯಾಪಕವಾಗಿ ವಿವರಿಸಿರಲಿಲ್ಲ. ಆದಕಾರಣ ಈ ಕೃತಿಯು ಬೌದ್ಧ ವಾಙ್ಮಯದಲ್ಲೇ ಅತ್ಯಂತ ಹೊಸ ಬಗೆಯ ಸಂಕಲನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
©2024 Book Brahma Private Limited.