ಸಾಹಿತ್ಯ ದಿಗ್ಗಜ ಡಾ. ಡಿ.ವಿ. ಜಿ ಅವರು ರಚಿಸಿದ ಕೃತಿ-ವೇದ ವೇದಾಂತ. ಭಾರತೀಯ ಪ್ರಾಚೀನ ತತ್ವಶಾಸ್ತ್ರಗಳ ಪೈಕಿ ವೇದಗಳಿಗೆ ಪ್ರಾಮುಖ್ಯತೆ ಹೆಚ್ಚಿದೆ. ಕೌಟುಂಬಿಕ, ಸಮಾಜ, ಆಡಳಿತ ಹೀಗೆ ಹತ್ತು ಹಲವು ವಲಯಗಳಲ್ಲಿ ನಿಯಮಗಳನ್ನು ನಿರ್ಧರಿಸುವ ರೀತಿಯಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ವಿವರಗಳಿವೆ. ಋಗ್ವೇದ, ಯಜುರ್ವೇದ, ಅಥರ್ವ ವೇದ, ಸಾಮವೇದ ಹೀಗೆ ನಾಲ್ಕು ವೇದಗಳು ದೇವರ ಬಾಯಿಯಿಂದ ಬಂದವು ಎಂಬುದು ಭಾರತೀಯರ ನಂಬಿಕೆ. ಹೀಗಾಗಿ, ವೇದಗಳು ಎಂದರೇನು? ಬದುಕಿಗೆ ಅವುಗಳ ಅನ್ವಯಿಕತೆ ಎಷ್ಟು ಅನಿವಾರ್ಯ ಇತ್ಯಾದಿ ಸ್ವರೂಪ-ಸ್ವಭಾವ ಕುರಿತ ವಿವರಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.