ಗಳಗನಾಥರು ಹಾಗೂ ಮಲ್ಲಾರಿ ದೀಕ್ಷಿತ ಚಿಂತಾಮಣಿ ದೀಕ್ಷಿತ ಕಕ್ಕನವರ ಜಂಟಿಯಾಗಿ ಬರೆದ ಕೃತಿ-ಸಚಿತ್ರ ಶೈವ ಸುಧಾರ್ಣವ. ಪುರಾಣಗಳನ್ನು ಯಾವ ರೀತಿಯಾಗಿ ಅವಲೋಕಿಸಬೇಕು ಎಂಬುದರ ದಿಗ್ದರ್ಶನ ನೀಡುವ ಮಹತ್ವದ ಕೃತಿ ಇದು. ವಿಷಯ ಪ್ರಸ್ತಾವನೆಗೆ ಒಟ್ಟು ಮೂರು ವಿಭಾಗಗಳನ್ನಾಗಿಸಿದೆ. ಮೊದಲನೆಯದು; ಶಿವ ಚರಿತ್ರ ಕಥನ (ದಕ್ಷ ಯಜ್ಞ ಧ್ವಂಸ, ಗಿರಿಜಾ ಕಲ್ಯಾಣ, ಶಬರಿ ಶಂಕರ ಲೀಲೆ, ಮಾರ್ಕಂಡೆಯ ಚರಿತ್ರೆ, ಲಿಂಗೋದ್ಭವ ಲೀಲೆ ಇತ್ಯಾದಿ) ಎರಡನೆಯದ್ದು; ಜ್ಞಾನ ಪ್ರದೀಪ (ಈಶ್ವರ ಮತ್ತು ಮಾಯೆಯ ಸಂಬಂಧ, ಮಾಯೆಯ ವ್ಯಕ್ತ ಮತ್ತು ಅವ್ಯಕ್ತ ರೂಪಗಳು, ಲಿಂಗಪೂಜೆ, ಭಕ್ತಿಯೋಗ ಇತ್ಯಾದಿ) ಮೂರನೇಯದ್ದು; ಶಿವಸ್ತುತಿಗಳು (ಶೈವ ಕವಚಂ, ಲಿಂಗಾಷ್ಟಕಂ, ಶಿವರಕ್ಷಾಸ್ತ್ರೋತ್ರಂ ಇತ್ಯಾದಿ) ಹೀಗೆ ವಿಷಯವನ್ನು ಸವಿಸ್ತಾರವಾಗಿ ಚರ್ಚಿಸಿದ್ದು, ವಿದ್ವತ್ ಪೂರ್ಣ ಗ್ರಂಥ ಇದಾಗಿದೆ.
©2024 Book Brahma Private Limited.