ಖ್ಯಾತ ಸಾಹಿತಿ ಡಿ.ವಿ.ಜಿ ಅವರು ಬರೆದ ಕೃತಿ-ಈಶೋಪನಿಷತ್ತು. 1953ರಲ್ಲಿ ಈ ಕೃತಿ ಮೊದಲ ಮುದ್ರಣ ಕಂಡಿತ್ತು. ಕೃತಿಯಲ್ಲಿ ಅವತರಣಿಕೆ, ಉಪನಿಷದ್ವಿಚಾರ, ತಾತ್ಪರ್ಯ ಸಂಗ್ರಹ, ಈಶೋಪನಿಷತ್ತು-ಛಾಯಾಪದ್ಯಗಳ ಟಿಪ್ಪಣಿಗಳು ಜೀವನ ತತ್ವ-ಮೌಲ್ಯಗಳನ್ನು ತಿಳಿಸಿಕೊಡುವ ಗ್ರಂಥವಿದು. ಮನುಷ್ಯನ ಅಂತರಂಗದಲ್ಲಿರುವ ಅಧ್ಯಾತ್ಮಕಿ ವಾಸನೆಯನ್ನು ಇಂತಹ ಗ್ರಂಥಗಳು ಜಾಗೃತಗೊಳಿಸುತ್ತವೆ. ಅಕ್ಕಿಯಿಂದ ಅನ್ನವಾಗಿಸುವುದು ಪಾತ್ರೆಯಲ್ಲ; ಬೆಂಕಿಯುರಿ ಮಂತ್ರದಿಂದ ತತ್ವದರ್ಶನವನ್ನು ಉಂಟಾಗಿಸುವುದು ಮನಸ್ಸಿನ ಕಾವು. ಅದೇ ಶ್ರದ್ಧೆ, ಅದೇ ತಪಸ್ಸು. ಜೀವ-ಜಗತ್ತು ಹಾಗೂ ಈಶ್ವರ ಅಂದರೆ ಜಗತ್ತನ್ನು ಅನುಭವಿಸುವ ಜೀವ, ಜೀವವನ್ನು ಅನುಭವಿಸುವ ಜಗತ್ತು ಹಾಗೂ ಎರಡಕ್ಕೂ ಅನುಭವ ಸಂಬಂಧವನ್ನು ಹೊಂದಿರುವ ತತ್ವ -ಈಶ್ವರ-ಈ ಎಲ್ಲವುಗಳ ಅಂತರ್ ಸಂಬಂಧವನ್ನು ಈ ಕೃತಿಯು ಒಳಗೊಂಡಿದೆ.
ಈ ಕೃತಿಯನ್ನು ಮೊದಲು ಮೈಸೂರಿನ ಕಾವ್ಯಾಲಯ ಪ್ರಕಾಶನವು 1970ರಲ್ಲಿ (ಪುಟ: 60) ಪ್ರಕಟಿಸಿತ್ತು.
©2024 Book Brahma Private Limited.