‘ಬೋಧವೊಂದೆ ಬ್ರಹ್ಮನಾದವೊಂದೆ’ ಶ್ಯಾಮಸುಂದರ ಬಿದರಕುಂದಿ ಅವರು ಸಂಪಾದಿಸಿರುವ ಶ್ರೀ ಶರೀಫ ಶಿವಯೋಗಿಯ ನೂರೊಂದು ಪದರತ್ನಗಳ ಸಂಕಲನ. ಶಿವಯೋಗಿ ಶರೀಫರು ನುಡಿದ ಬೋಧೆಗಳು ಮತ್ತು ತತ್ವಪದಗಳ ಸಂಕಲನ ಇದು. ಶ್ರೀ ಶರೀಫರ ಬೋಧನೆ-ಶಿವಯೋಗ ಹಿರಿಮೆ, ಅಗ್ಗದರಿವಿಯ ತಂದು, ಅದು ನೋಡು ಅದು ನೋಡು, ಅಡಗಿ ಮಾಡುವರೆ ಇಬ್ಬರು ಕೂಡಿ, ಅಪ್ಪಾ ಆರಿಗು ಸಿಗದ ಬದುಕಿನೊಳಿಟ್ಟ, ಅಳಬೇಡಾ ತಂಗಿ ಅಳಬೇಡ, ಅಲ್ಲಿಕೇರಿಗೆ ಹೋಗೊಣು, ಇದೇಮನಿ ಇದೇಮನಿ, ಇದು ಏನು ಸೋಜಿಗವೋ, ಇದೇ ಬ್ರಹ್ಮಜ್ಞಾನ ಸೇರಿದಂತೆ ಶಿವಯೋಗಿ ಶರೀಫರ 101 ತತ್ವಪದಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಕವಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಸದ್ಯ ಹುಬ್ಬಳ್ಳಿ ನಿವಾಸಿಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್.ಡಿ. ಪಡೆದಿರುವ ಅವರು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಕೃತಿಗಳು: ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು (ಕವನ ಸಂಕಲನ), ಕೃತಿ ನೋಟ, ಅಚ್ಚು ಕಟ್ಟು, ನೆಲೆಗಟ್ಟು, ಪ್ರಸಂಗೋಚಿತ (ವಿಮರ್ಶೆ), ನವ್ಯಮಾರ್ಗದ ಕಾದಂಬರಿಗಳು (ಪಿಎಚ್.ಡಿ. ಮಹಾಪ್ರಬಂಧ), ಗಂಧಕೊರಡು, ಪ್ರಬಂಧಪ್ರಪಂಚ, ಸ್ವಾತಂತ್ರ್ಯದ ಸವಿನೀರು, ಕರ್ಕಿಯವರ ಸಮಗ್ರ ಸಾಹಿತ್ಯ ( ಸಂಪಾದಿತ), ಗರೂಡ ಶ್ರೀಪಾದರಾವ; ಶಂಕರ ಮೊಕಾಶಿ ಪುಣೇಕರ; ಫ.ಶಿ. ಭಾಂಡಗೆ (ಇತರೆ) ...
READ MORE