ಲೇಖಕಿ ಮನೋರಮ ಬಿ.ಎನ್. ಅವರ ಸಂಶೋಧನಾ ಕೃತಿ ʻಯಕ್ಷಮಾರ್ಗಮುಕುರʼ. ಪ್ರಾಚೀನಗ್ರಂಥಗಳ ಶ್ಲೋಕಗಳನ್ನು, ಅದರಲ್ಲಿರುವ ಕ್ಲಿಷ್ಟ ವಿಷಯಗಳನ್ನು ಸರಳ ಮಾಡಿ ಅವುಗಳ ಅರ್ಥ, ವಿಶ್ಲೇಷಣೆಯನ್ನು ಆಧಾರಸಹಿತ ಪುಸ್ತಕದಲ್ಲಿ ಮಂಡಿಸಿದ್ದಾರೆ. ಹೆಜ್ಜೆಗಾರಿಕೆಯ ಬಗೆಬಗೆಯ ವೈವಿಧ್ಯತೆಗಳನ್ನೂ ವಿವರಿಸಿದ್ದಾರೆ. ಜೊತೆಗೆ ಪ್ರಾಚೀನ ಗ್ರಂಥಗಳ ಹೆಸರು, ಬರೆದವರು, ರಚಿತವಾದ ಕಾಲ, ಮಹತ್ವ ಎಲ್ಲವನ್ನೂ ತಮ್ಮ ಸಂಶೋಧನೆಯಿಂದ ಕಟ್ಟಿಕೊಟ್ಟಿದ್ದಾರೆ. ಹೀಗೆ ಮನೋರಮ ಅವರು ತಮ್ಮ ಪುಸ್ತಕದ ಮೂಲಕ ಯಕ್ಷಗಾನ ನಾಟ್ಯಲಕ್ಷಣಗಳನ್ನು ಸಾಮಾನ್ಯ ಜನರಿಗೆ ಅರ್ಥಮಾಡಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.
©2025 Book Brahma Private Limited.