ಮಂಕುತಿಮ್ಮನ ಕಗ್ಗ ಖ್ಯಾತಿಯ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಕೃತಿ-ಪುರುಷ ಸೂಕ್ತ. ವೇದ ಮಂತ್ರಗಳಲ್ಲಿ ಈ ಪುರುಷ ಸೂಕ್ತವು ಬಹುಮುಖ್ಯವಾದ ಅಧ್ಯಯನ ವಿಭಾಗ. ಋಗ್ವೇದದ ಹತ್ತನೇ ಮಂಡಲದಲ್ಲಿ 90ನೇ ಸೂಕ್ತವಾಗಿದೆ. ಪುರುಷ ಸೂಕ್ತವನ್ನು ತಿಳಿದವರು ಪರಬ್ರಹ್ಮನನ್ನು ತಿಳಿದಂತೆ. ಅಷ್ಟೊಂದು ಪ್ರಾಮುಖ್ಯತೆ ಇದೆ. ಇದು ವೇದ ವೇದಾಂತಗಳ ಸಾರ ಎಂದೇ ಹೇಳಲಾಗುತ್ತದೆ. ಅಲೌಕಿಕತೆಯನ್ನು ಪ್ರತಿಪಾದಿಸುವುದೇ ಪುರುಷ ಸೂಕ್ತ. ಸಂಸ್ಕೃತ ಗೊತ್ತಿಲ್ಲದ ಓದುಗರಿಗೆ ಈ ಕೃತಿಯಲ್ಲಿ ಸರಳ ಕನ್ನಡದ ವಿವರಣೆ ಇದೆ.
‘ಇಂದ್ರಿಯಗಳ ಹಿಡಿತಕ್ಕೆ ಸಿಗದ ಲೋಕತತ್ವದ ಸಾರವೇ ಪುರುಷ ಸೂಕ್ತವಾಗಿದೆ. ಪುರುಷ ಸೂಕ್ತದಲ್ಲಿ ನಂಬಿಕೆ ಇಲ್ಲದ ಜನರಿಗೆ ಈ ಗ್ರಂಥ ನಿಷ್ಪ್ರಯೋಜಕ. ಈ ವಿಷಯದ ಗಂಭೀರತೆಯನ್ನು, ಪೂಜ್ಯತೆಯನ್ನು ಕಾಣಲಾರದೇ, ಗ್ರಂಥವಾಕ್ಯಕ್ಕೆ ಅಪಾರ್ಥವನ್ನು ಕಲ್ಪಿಸಿ, ಲೋಕದ ಸುಸ್ಥಿತಿಗೆ ಹಾನಿ ತಂದರೂ ತರಬಹುದು’ ಎಂದು ಸ್ವತಃ ಡಿವಿಜಿ ಅವರೇ ಹೇಳಿಕೊಂಡಿದ್ದಾರೆ.
©2024 Book Brahma Private Limited.