ಡಾ. ಪಿ.ವಿ. ನಾರಾಯಣ ಅವರ ಕೃತಿ-ಕನ್ನಡ ಚಂಪೂ ಜೈನ ಪರಿಭಾಷೆ. ಕನ್ನಡ ಚಂಪೂ ಕಾವ್ಯಗಳಲ್ಲಿ ಜೈನ ಪರಿಭಾಷೆ ಹಾಗೂ ಪರಿಕಲ್ಪನೆಗಳು ಹೇಗೆ ಹಾಸುಹೊಕ್ಕಾಗಿವೆ ಎಂಬುದರ ವಿಶ್ಲೇಷಣಾತ್ಮಕ ಬರಹಗಳುನ್ನು ಇಲ್ಲಿ ಸಂಕಲಿಸಲಾಗಿದೆ. ಸಾವಿರ ವರ್ಷಗಳಿಗೆ ಮೇಲ್ಪಟ್ಟ ಇತಿಹಾಸ ಚಂಪೂವಿಗಿದೆ. ಈ ಪ್ರಕಾರದಲ್ಲಿ ಆಯಾ ಭಾಷೆಯಲ್ಲಿ ಬಹುಕಾಲ ನಿಲ್ಲುವ ಉತ್ಕೃಷ್ಟವಾದ ಸಾಹಿತ್ಯ ನಿರ್ಮಿತವಾಗಿದೆ. ವಿಶೇಷವಾಗಿ ಜೈನಕವಿಗಳು ಚಂಪೂಕಾವ್ಯಪದ್ಧತಿಯನ್ನು ಸ್ವಧರ್ಮಪ್ರಚಾರಕ್ಕಾಗಿ ಹೇಗೆ ಉಪಯೋಗಿಸಿಕೊಂಡರು. ಈ ಅಂಶವೂ ಸಹ ಪ್ರಮುಖವಾಗಿ ಇಲ್ಲಿ ಕಾಣಿಸಲಾಗಿದೆ.
©2024 Book Brahma Private Limited.