ಧರ್ಮ, ತತ್ವಶಾಸ್ತ್ರ ದರ್ಶನ, ಪುರಾಣ ವಿಷಯಗಳನ್ನು ಕುರಿತು ಪ್ರಭಾಕರ ಜೋಷಿ ಅವರು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಕಲನ ತತ್ವ ಮನನ. ಭಾರತೀಯ ದರ್ಶನಶಾಸ್ತ್ರ, ಚಿಂತನವಿಧಾನ, ಪುರಾಣ ವಿಚಾರಗಳನ್ನು ಪಂಥೀಯ ಅತಿವಾದಗಳಿಲ್ಲದ, ಒಂದು ಉದಾರ ಗ್ರಹಿಕೆಯಿಂದ ನೋಡುವ, ಅರ್ಥೈಸುವಿಕೆಗೆ ಪ್ರಚೋದಿಸುವ, ಚರ್ಚೆಗಳನ್ನು ಪ್ರೇರಿಸುವ ಬರಹಗಳು ಇಲ್ಲಿವೆ.
ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು. ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ...
READ MORE