‘ವಂದೇ ಗುರು ಪರಂಪರಾಮ್ ’ ಗುರುರಾಜ ಪೋಶೆಟ್ಟಿಹಳ್ಳಿ ಅವರ ಕೃತಿ. ವೇದೋಪನಿಷತ್-ಪುರಾಣಗಳಲ್ಲಿ ಅಡಗಿದ್ದ ಪರಮಸತ್ತ್ವ ಶ್ರೀಸಾಮಾನ್ಯನಿಗೂ ಅರ್ಥವಾಗುವ ಹಾಗೆ ಬರೆಯುವ ಕಲೆ ಯುವ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ಸಾಧಿಸಿದೆ. ಅವರ ಬರವಣಿಗೆಯ ಕನ್ನಡದ ಸೊಗಡನ್ನು ಓದಿಯೇ ಅನುಭವಿಸಬೇಕು. ಈ ಹೊತ್ತಿಗೆಯಲ್ಲಿ ಗುರು ತತ್ತ್ವದ ಹಿರಿಮೆ, ವೇದವ್ಯಾಸ, ದಕ್ಷಿಣಾಮೂರ್ತಿ ಹಾಗೂ ದತ್ತಾವತಾರದ ರಹಸ್ಯ- ಸ್ವಾರಸ್ಯ, ಅವಧೂತಪಂಥದ ಬಗ್ಗೆ ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ. ಅಧ್ಯಾತ್ಮಾಸಕ್ತರಿಗೆ ಸಂಗ್ರಹಯೋಗ್ಯ ಗ್ರಂಥ ಇದಾಗಿದೆ.
ಲೇಖಕ ಗುರುರಾಜ ಪೋಶೆಟ್ಟಿಹಳ್ಳಿ ಸಾತ್ವಿಕ ಸಾಹಿತ್ಯ ವಕ್ತಾರರೆಂದೇ ಗುರುತಿಸಿಕೊಂಡಿದ್ದಾರೆ. 1980ರಲ್ಲಿ ಜನಿಸಿದ ಅವರು ಪತ್ರಿಕೋದ್ಯಮ ಪದವಿ ಹಾಗೂ ಕನ್ನಡ ಎಂ.ಎ ಪೂರ್ಣಗೊಳಿಸಿದ್ದಾರೆ. ನೀತಿ ಆಯೋಗದಿಂದ ಮಾನ್ಯತೆ ಪಡೆದ ಐವಿಎಪಿಯಿಂದ ಇಂಡಾಲಜಿ-ಗಣಪತಿ ಕುರಿತು ವಿಶೇಷ ಅಧ್ಯಯನಕ್ಕೆ ರಾಜಮಾತಾ ಶ್ರೀಮತಿ ಪ್ರಮೋದಾದೇವಿ ಒಡೆಯರ್ ರಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸಂಸ್ಕೃತಿ ಚಿಂತಕರು, ಅಂಕಣಕಾರರೂ ಆಗಿರುವ ಗುರುರಾಜ ಪೋಶೆಟ್ಟಿಹಳ್ಳಿ ಅವರು ಮಾಧ್ಯಮ ಸಮಾಲೋಚಕ ಹಾಗೂ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದು, ಪ್ರಣವ ಮೀಡಿಯಾ ಹೌಸ್ ರೂವಾರಿಗಳಾಗಿದ್ದಾರೆ. ಪ್ರಕಟಿತ ಕೃತಿಗಳು: ಕನ್ನಡದ ಕಂಪಿನಲಿ ಕರಿವದನ, ಭಕ್ತಿ ಪಾರಿಜಾತ, ವಂದೇ ಗುರುಪರಂಪರಾಮ್’, ಅಡ್ವೈಸರ್ ಯೋಗ ವಿಶೇಷಾಂಕ 2018(ಅತಿಥಿ ...
READ MORE