‘ಪವಮಾನ’ ಎಂಬುದು ಮಂತ್ರ, ಆರ್ಥ ಹಾಗೂ ವಿವರಣೆಯನ್ನು ಒಳಗೊಂಡ ಹಾಗೂ ಹಿರಿಯ ಲೇಖಕ ಆರ್.ಎಲ್. ಕಶ್ಯಪ್ ಅವರು ಇಂಗ್ಲಿಷಿನಲ್ಲಿ ರಚಿಸಿದ ಕೃತಿ. ರ.ಬ.ಜಹಾಗೀರದಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪವಮಾನ ಎಂಬುದು ಗಾಳಿ, ವಾಯುವಿಗೆ ಇರುವ ಹೆಸರು. ರಾಮಾಯಣದ ಹನುಮಂತನಿಗೂ ‘ಪವಮಾನ’ ಎಂದು ಕರೆಯುತ್ತಾರೆ. ದೇವರನ್ನೂ ಒಳಗೊಂಡಂತೆ ಎಲ್ಲ ಮಾನವರಿಗೂ ಶನಿದೇವರ ಕಾಟ ತಪ್ಪಿದ್ದಲ್ಲ. ಆದರೆ, ಪವಮಾನನ ಭಕ್ತರಾದರಿಗೆ ಮಾತ್ರ ಶನಿ ಕಾಡಲಾರ ಎಂಬ ನಂಬಿಕೆಯೂ, ಪುರಾಣದಲ್ಲಿ ಕಥೆಯಾಗಿಯೂ ಪ್ರಸಿದ್ಧಿ ಪಡೆದಿದೆ. ದಾಸರು ಪವಮಾನವನ್ನು ಜಗದ ಪ್ರಾಣ ಎಂತಲೂ ಹಾಡಿ ಹೊಗಳಿದ್ದಾರೆ. ಪವಮಾನದ ಮಂತ್ರಗಳನ್ನು ಜಪಿಸಿದರೆ ಸಕಲ ವಿಘ್ನಗಳು ನಿವಾರಣೆಯಾಗುವುದು ಎಂಬುದು ಭಕ್ತರ ನಂಬಿಕೆ.
©2025 Book Brahma Private Limited.