ಲೇಖಕ ಎಸ್. ಜಿ ಕೃಷ್ಣ ಅವರು ಬರೆದಿರುವ ಉಪನಿಷತ್ ಪ್ರಣೀತ ಜಗತ್ ಸೃಷ್ಟಿಯ ಕಥೆ
ಕೃತಿಯು, ಆಧ್ಯಾತ್ಮದ ಕುರಿತಾದ, ಮತ್ತು ಅವುಗಳಲ್ಲಿ ವಿಜ್ಞಾನದ ಆಧಾರವನ್ನು ಕಾಣುವಂತಹ ದೃಷ್ಟಿಕೋನದ ಎಳೆಯನ್ನು ಪರಿಚಯಿಸಿದೆ. ವಿಜ್ಞಾನವೆಂಬುದು ಆಧ್ಯಾತ್ಮವಲ್ಲ ಎಂಬ ಕುತೂಹಲ ಹುಟ್ಟಿಸುವ ಸಂಗತಿ ಕುರಿತಾದ ಚರ್ಚೆ, ಹಾಗೂ ಆಧ್ಯಾತ್ಮವೂ ವಿಜ್ಞಾನವೇ ಎಂಬ ತಾತ್ವಿಕ ಸತ್ಯದ ನಡುವೆ ಈ ಕೃತಿ ಓದುಗರಲ್ಲಿ ಆಸಕ್ತಿ ಹುಟ್ಟಿಸುವಂತದ್ದು.
ಹದಿನೈದು ಭಾಗಗಳಲ್ಲಿ ಸರಳವಾಗಿ ಲೇಖಕರು ತಮ್ಮ ವಿಷಯ ಮಂಡನೆಯನ್ನು ಮಾಡಿದ್ದಾರೆ. ಕೆಲವಡೆ ಉಪಶೀರ್ಷಿಕೆ ನೀಡುತ್ತಾ ಕಥೆಯ ರೂಪದಲ್ಲಿ ವೈಜ್ಞಾನಿಕ ಸಂಗತಿಗಳನ್ನು ತಿಳಿಸಿದ್ದಾರೆ.
©2024 Book Brahma Private Limited.