‘ಅಥರ್ವಣ ವೇದ ಸಾರ ’ ಎಂಬುದು ತಿ.ನಾ. ರಾಘವೇಂದ್ರ ಅವರ ಧಾರ್ಮಿಕ-ತತ್ವಜ್ಞಾನ ಒಳಗೊಂಡ ಕೃತಿ. ಹಿಂದೂ ಧರ್ಮದ ನಾಲ್ಕು ಪ್ರಮುಖ ವೇದಗಳಲ್ಲಿ ಅಥರ್ವಣವೇದ ಎಂಬುದು ಸಹ ಒಂದು. ಪ್ರತಿ ವೇದವು ಮನುಷ್ಯನ ನಡೆಯನ್ನು ನಿರ್ಧರಿಸುತ್ತವೆ. ಅವುಗಳ ಪಾಲನೆಯು ಮನುಷ್ಯ ಜನ್ಮದ ಸಾರ್ಥಕ ಎಂದು ಬಗೆಯಲಾಗುತ್ತಿದೆ. ಅಥರ್ವಣ ವೇದ ಕುರಿತು ವಿವರಗಳನ್ನು ಸರಳ ಕನ್ನಡದಲ್ಲಿ ಲೇಖಕರು ವಿವರಿಸಿದ್ದು ಈ ಕೃತಿಯ ಹೆಗ್ಗಳಿಕೆ.
ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...
READ MORE