ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ಅಧ್ಯಾತ್ಮ ಕುರಿತು ರಚಿಸಿದ ಕವನಗಳ ಸಂಕಲನ-ಭಕ್ತಿ ಕುಸುಮಾಂಜಲಿ. ಒಟ್ಟು 69 ಕವಿತೆಗಳಿವೆ. ಇಲ್ಲಿಯ ಕಾವ್ಯಗಳು ಬದುಕಿನ ನೈಜ ಸತ್ಯದ ಅರಿವನ್ನು ಮೂಡಿಸುವಲ್ಲಿ ಹಾತೊರೆಯುತ್ತವೆ .ಈ ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಹಂಸ ಕವಿ ಬೀದರ್ ‘ ಎಂ. ಜಿ. ದೇಶಪಾಂಡೆ. ಸಂಕ್ಷಿಪ್ತ ನಾಮದಿಂದಲೇ ಧರಿನಾಡಿನ ಸಾಹಿತಿಗಳಿಗೆ ಚಿರಪರಿಚಿತರು .ಪ್ರಕಾಶಜ್ಯೋತಿ , ಹೂ ಬಡಿದಾಗ , ಭ್ರಮೆ, ಪಾರಿಜಾತ, ಅನ್ವೇಷಣೆ, ಒಲವಿನ ಚಿತ್ತಾರಗಳು ಮುಂತಾದ ಕೃತಿಗಳು ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದವರು .ಇಲ್ಲಿನ ಕವಿತೆಗಳು ಆಧ್ಯಾತ್ಮಿಕ ಲೋಕದಲ್ಲಿ ಬೆಳಕು ಚೆಲ್ಲುವಲ್ಲಿ ಸಮರ್ಥ ವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನಿನ್ನ ಪಾದಗಳಲ್ಲಿ.., ಚಿಂತನೆಯ ಕ್ಷಣ, ಏತಕ್ಕಾಗಿ, ನವನೀತ , ಬಯಲು, ಕೋರುವೆ , ಯಾರು ನಿನ್ನವರು , ನಿನ್ನ ನೆನಹು, ಕದ, ನೆನಪು ,ಗುರುವಿನ ಪಾದ, ಸೊಲ್ಲು ,ನಿತ್ಯ ನಿತ್ಯ, ಅಚಲ ನಿರ್ಧಾರ ಮುಂತಾದ ಕವಿತೆಗಳು ಓದುಗರಿಗೆ ಮನತಣಿಸುತ್ತವೆ ಎಂದು ಕವಿಗಳು ಹೇಳಿದ್ದಾರೆ.
©2024 Book Brahma Private Limited.