‘ಧ್ಯಾನಸೂತ್ರ- ಓಶೋ’ ಓಶೋ ರಜನೀಶರ ಕೃತಿ. ಲೇಖಕ ಟಿ.ಎನ್. ವಾಸುದೇವಮೂರ್ತಿ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ಓಶೋ ನೀಡಿರುವ ಒಂಭತ್ತು ಅದ್ಭುತ ಅಮೃತ ಪ್ರವಚನಗಳಿಂದ ರಚಿತವಾದ ಧ್ಯಾನ ಮಾರ್ಗದರ್ಶನದ ಅಪ್ರತಿಮ ಸಂಕಲನ. ಆಧ್ಯಾತ್ಮದ ಕುರಿತಾಗಿ ಹೊಸ ಚಿಂತನೆಗಳನ್ನು ಹುಟ್ಟುಹಾಕಿದ ಓಶೋ ಧ್ಯಾನಸೂತ್ರಗಳ ಕುರಿತಾಗಿ ಹೆಚ್ಚಿನ ಗಮನ ಹರಿಸಿದ್ದಾರೆ. ಧಾರ್ಮಿಕತೆ, ಭಕ್ತಿ ಪ್ರತಿಯೊಂದಕ್ಕೂ ತಮ್ಮ ವಿಭಿನ್ನ ಚಿಂತನೆಗಳ ಮೂಲಕ ಹೊಸ ಆಯಾಮ ನೀಡುವ ರಜನೀಶರ ಧ್ಯಾನಸೂತ್ರಗಳ ಕುರಿತಾದ ಮಾಹಿತಿಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
©2025 Book Brahma Private Limited.