ಉಪನಿಷತ್ ಕಥಾವಳಿ-ರಂಗನಾಥ ರಾಮಚಂದ್ರ ದಿವಾಕರ ಅವರು ಬರೆದ ಮೂರನೇ ಆವೃತ್ತಿಯ ( 1935 ಹಾಗೂ 1942ರಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಮುದ್ರಣ) ಕೃತಿ. ಸಾಮ್ರಾಟನಾದರೂ ನೆಮ್ಮದಿ ಇರುತ್ತದೆಂದಲ್ಲ; ಎಷ್ಟೇ ತಿಳಿದಿದ್ದೇನೆ ಎಂದರೂ ಕಡಿಮೆ ಮತ್ತು ಜ್ಞಾನದ ಹಸಿವು ಹಿಂಗದು. ಅರಿವೇ ಗುರು ಎಂಬುದು ಅಂತಿಮ ಸತ್ಯ. ಅದುವೇ ದೇವನೊಲಿಯುವ ಪರಿ. ಕೇವಲ ಹಣದ ಸಂಪತ್ತಿನಿಂದ ಮನಸ್ಸು ತೃಷ್ತಿಯಾಗದು. ಕೇವಲ ಸಂಪತ್ತಿನಿಂದ ಅಮೃತವನ್ನೂ ಪಡೆಯಲಾಗದು. ಇಂತಹ ಉಪನಿಷತ್ ವಿಚಾರಗಳು-ಈ ಕೃತಿಯ ಗಟ್ಟಿತನ.
ಭಾರತೀಯ ತತ್ರವಜ್ಞಾನವನ್ನು ಅರಿಯಬೇಕಾದರೇ ಉಪನಿಷತ್ತುಗಳ ಸಾರವುಳ್ಳ ಈ ಕೃತಿಯು ಮುಖ್ಯ ದ್ವಾರದಂತಿದೆ ಎಂದು ಲೇಖಕ ರಂಗನಾಥ ದಿವಾಕರ ಅವರು ಕೃತಿಯ ಕುರಿತು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಸತ್ಯಕಾಮ ಜಾಬಾಲ, ಉಪಕೋಸಲನ ಕಥೆ, ಆಶ್ವಪತಿ ಕೈಕೇಯಿ ಜ್ಞಾನ, ಅರುಣೀ ವಿದ್ಯೆ, ಮಹಾಜ್ಞಾನಿ ಯಾಜ್ಞವಲ್ಕ್ಯ ಸೇರಿದಂತೆ ಇತರೆ ಶೀರ್ಷಿಕೆಯ 20 ಕಥೆಗಳು ಒಳಗೊಂಡಿವೆ. ಈ ಕಥೆಗಳ ಸಾರಾಂಶ ದೇಶ-ಕಾಲಾತೀತ; ಮಾನವೀಯತೆ ಹಾಗೂ ಜೀವನ ನಡೆ-ನುಡಿಯ ಪರಿಣಾಮಕತೆಯಿಂದಾಗಿ ಸದಾ ಮಾರ್ಗದರ್ಶಕವಾಗಿವೆ.
©2024 Book Brahma Private Limited.