ಭಾರತೀಯ ತತ್ವಜ್ಞಾನ: ವೈಚಾರಿಕ ಮತ್ತು ಸಾಮಾಜಿಕ ಸಂಘರ್ಷ-ಈ ಕೃತಿಯನ್ನು ಮೂಲದಲ್ಲಿ ಎಸ್.ಜಿ. ಸರ್ದೇಸಾಯಿ ಆಂಗ್ಲ ಭಾಷೆಯಲ್ಲಿ ಬರೆದಿದ್ದು, ಸಾಹಿತಿ ಗೌರೀಶ ಕಾಯ್ಕಿಣಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ತತ್ವಜ್ಞಾನವು ಮೂಲತಃ ವೈಚಾರಿಕವಾಗಿದ್ದು, ಸಾಮಾಜಿಕ ಸಂಘರ್ಷವನ್ನೇ ಎದುರಿಸುತ್ತಾ ಬಂದಿದೆ. ಏಕೆಂದರೆ, ಭಾರತೀಯ ತತ್ವಜ್ಞಾನವನ್ನು ಪುರೋಹಿತಶಾಹಿ ವಿರೋಧಿಸುತ್ತಲೇ ಬಂದಿದ್ದು, ಧರ್ಮ-ಜಾತಿ ನೆಪದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಇಂದಿಗೂ ಹವಣಿಸುತ್ತಿದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಲೇಖಕರು ವಿಶ್ಲೇಷಿಸಿದ್ದನ್ನು ಇಲ್ಲಿ ಕಾಣಬಹುದು.
©2024 Book Brahma Private Limited.