`ಹಿಂದು ಧರ್ಮ: ಹಿಂದು-ಇಂದು' ಎಂಬುದು ಹಿರಿಯ ಲೇಖಕ ಪ್ರೊ. ಎಂ.ವಿ. ನಾಡಕರ್ಣಿ ಅವರ ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಎಂಬುದು ಹಾಸುಹೊಕ್ಕಾಗಿರುವ ಧರ್ಮದ ಕಲ್ಪನೆಯಾಗಿದೆ. ಭಾರತವು ಧರ್ಮ ವೈವಿಧ್ಯತೆಯ ಸಂಗಮದಂತಿದ್ದರೂ, ‘ಹಿಂದು’ ಎಂಬ ಒಂದು ಪದದಿಂದ ಸಾಮರಸ್ಯವನ್ನು ಕಟ್ಟಿಕೊಡುವಂತಿದೆ. ಹಿಂದು ಎಂಬ ಪರಿಕಲ್ಪನೆಗೆ ಶ್ರೀಮಂತ ಇತಿಹಾಸವೂ ಇದೆ. ಆದರೆ, ಇಂದಿನ ಯುವಪೀಳಿಗೆಯು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹಿಂದೂ ಧರ್ಮವನ್ನು ನಿರ್ಲಕ್ಷಿಸಿ ಮಾತನಾಡುವ ಪ್ರವೃತ್ತಿಅನುಸರಿಸುತ್ತಿದೆ. ಇದಕ್ಕೆ ಸೂಕ್ತ ಉತ್ತರವಾಗಿ ಲೇಖಕರು, ‘ಹಿಂದು ಧರ್ಮ’ದ ನೈಜ ಸ್ವರೂಪ-ಸ್ವಭಾವವನ್ನು ತೋರಿದ್ದು, ಈ ನಿಟ್ಟಿನಲ್ಲಿ ಹಿಂದು ಧರ್ಮವನ್ನು ಸ್ವೀಕರಿಸುವ ಆಶಯ ಈ ಕೃತಿಯ ಹಿಂದೆ ಇದೆ.
©2025 Book Brahma Private Limited.