ಹಿರಿಯ ಲೇಖಕ ಆರ್.ಎಲ್. ಕಶ್ಯಪ್ ಅವರು ಮೂಲ ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕಿ ವಿಶಾಲಾಕ್ಷಿ ಸತ್ಯನ್ ಅವರು ‘ಆಧುನಿಕ ಕಾಲಕ್ಕೆ ವೇದ ಜ್ಞಾನ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಹೀಗೆ ನಾಲ್ಕು ವೇದಗಳಿದ್ದು, ಪ್ರತಿ ವೇದದಲ್ಲಿ ಒಂದೊಂದು ಉಪ ವಿಭಾಗವಿದೆ. ಅವುಗಳೆಂದರೆ; ಸಂಹಿತೆಗಳು (ಮಂತ್ರಗಳು ಮತ್ತು ಆಶೀರ್ವಾದಗಳು), ಅರಣ್ಯಕಗಳು (ಆಚರಣೆಗಳು, ಸಮಾರಂಭಗಳು, ಯಜ್ಞಗಳು ಮತ್ತು ಸಾಂಕೇತಿಕ-ಯಜ್ಞಗಳ ಪಠ್ಯ), ಬ್ರಾಹ್ಮಣಗಳು (ಆಚರಣೆಗಳು, ಸಮಾರಂಭಗಳು ಮತ್ತು ಯಜ್ಞಗಳ ವ್ಯಾಖ್ಯಾನಗಳು), ಉಪನಿಷತ್ತುಗಳು (ಧ್ಯಾನವನ್ನು ಚರ್ಚಿಸುವ ಪಠ್ಯಗಳು, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಜ್ಞಾನ) ಹೀಗೆ ವೇದಗಳಲ್ಲಿ ಅನಂತ ಶಾಖೆಗಳಿವೆ. ಪ್ರತಿ ವೇದಕ್ಕೂ ಸ್ಕಂದಗಳಿವೆ. ಇಂತಹ ಅಮೂಲ್ಯ ವಿಷಯಗಳ ಕುರಿತು ಆಧುನಿಕ ಕಾಲದ ಜನರಿಗೆ ವೇಧ ಜ್ಞಾನ ನೀಡುವ ಅಗತ್ಯವನ್ನು ಈ ಕೃತಿ ಪ್ರತಿಪಾದಿಸುತ್ತದೆ.
©2024 Book Brahma Private Limited.