ಜಿಡ್ಡು ಕೃಷ್ಣಮೂರ್ತಿ ಅವರು ಭಾರತದ ಮಹಾನ್ ತತ್ವಜ್ಞಾನಿ. ಜೀವನದ ಕ್ಷಣಿಕತೆಯಲ್ಲಿ ನಂಬಿಕೆ ಇರದವರು. ಜೀವನ ಸಾರ್ಥಕತೆಯನ್ನು ಖಚಿತ ಶಬ್ದ ಹಾಗೂ ಪರಿಕಲ್ಪನೆಗಳಲ್ಲಿ ವ್ಯಾಖ್ಯಾನಿಸಿ, ಜನಮಾನಸದಲ್ಲಿ ಮೂಡಿಸಲು ಯತ್ನಿಸಿದವರು. ಇತಿಹಾಸವು ಮನುಕುಲದ ಕಥೆ ಎಂದೇ ಹೇಳಿ ಇಡೀ ಜಗತ್ತಿನ ಆಂತರ್ಯದ ಜೀವವೇ ಜನರು ಅಂದರೆ ‘ನೀವು’ ಎಂದೇ ಅವರು ಜನರ ಮಹತ್ವವನ್ನು ತೋರಿಸಿಕೊಡುವ ಮೂಲಕ ಜನಸೇವೆಯೇ ಜನಾರ್ದನನ ಸೇವೆ ಎಂಬ ಮಾತಿಗೆ ಮೌಲ್ಯ ತಂದುಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ರೂಪುಗೊಂಡ ಚಿಂತನೆಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
©2024 Book Brahma Private Limited.