`ಆರೋಗ್ಯ ಭಾಸ್ಕರಾದಿಚ್ಚೆತ’ ಎಂಬುದಾಗಿ ಆದಿತ್ಯೋಪಾಸನೆದಿಂದ ವಿಶೇಷವಾಗಿ ಆರೋಗ್ಯ ಲಾಭವನ್ನು ಪಡೆಯಬಹುದೆಂಬುದು ಆರ್ಷವಾಣಿ, ಸೂರ್ಯಸಂಬಂಧವಾದ ಸ್ತೋತ್ರಗಳಲ್ಲೆಲ್ಲಾ ಆದಿತ್ಯ ಹೃದಯ ಸ್ತೋತ್ರಕ್ಕೆ ಮಹತ್ವವಾದ ಸ್ಥಾನವಿದೆ. ಈ ಸ್ತೋತ್ರದ ಪಾರಾಯಣದಿಂದ ಬಹು ಜನರು ತಮ್ಮ ಇಷ್ಟಾರ್ಥಸಿದ್ದಿ ಹೊಂದಿರುತ್ತಾರೆ. - ಸಂಸ್ಕೃತ ಭಾಷೆಯಲ್ಲಿರುವ ಈ ಸ್ತೋತ್ರವನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ ಆರ್. ಶಂಕರನಾರಾಯಣ್.
ಆರ್. ಶಂಕರನಾರಾಯಣ್ ಅವರು ಹುಟ್ಟೂರು ಆನೇಕಲ್ ತಾಲೂಕು ರಾಚಮಾನಹಳ್ಳಿ. 1979ರಲ್ಲಿ ಕನ್ನಡ ಎಂ.ಎ. ಪದವಿ ಪೂರೈಕೆ. ದೂರವಾಣಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಣೆ. ಸಂಗೀತ ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಗೆ ಅವಿರತವಾದ ಸೇವೆ ಸಲ್ಲಿಸುವುದು ಅವರ ಬದುಕಿನ ಗುರಿಯಾಗಿತ್ತು. ಸಂಗೀತ ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಗೆ ಸಂಬಂಧಿಸಿದಂತೆ ‘ಆಧಿತ್ಯ ಹೃದಯಂ, ಶ್ರೀ ಶಂಕರ ಬೋಧಾಮೃತ, ಪರಿಣಯ ಪ್ರಬಂಧ, ಚಿತ್ರಪಲ್ಲವ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE