ಹಿರಿಯ ಲೇಖಕಿ ಡಾ.ಮೀನಾಕ್ಷಿ ಬಾಳಿ ಅವರ ಕೃತಿ-ತತ್ವಪದದೊಳಗಿನ ತಿಳಿವು. ತತ್ವಪದಗಳನ್ನು ಗಂಭೀರವಾಗಿ ಅಧ್ಯಯನ ಮಾಡಿರುವ ಕೃತಿ. ತತ್ವಪದಗಳ ರಾಚನಿಕ ಅಧ್ಯಯನ, ಅದರ ಅನುಭವ ಅಧ್ಯಯನ, ತಾತ್ವಿಕ ಅಧ್ಯಯನ,ಮೂರು ನೆಲೆಗಳಲ್ಲೂ ಇಲ್ಲಿನ ಬರವಣಿಗೆ ಇದೆ. ತತ್ವಪದ ಸಾಹಿತ್ಯದ ಸಂಬಂಧಿಸಿದಂತೆ 9 ಲೇಖನಗಳಿದ್ದು, ಬೌದ್ಧ ತತ್ವ ಸ್ಪರ್ಶದಲ್ಲಿ ತತ್ವಗಳು, ಬಬಲಾದಿ ಚಿಕ್ಕಯ್ಯನವರ ಅನುಭಾವ ಸಾಹಿತ್ಯ, ಮಹಿಳಾ ತತ್ವಪದಕಾರರು ಸಾಮಾಜಿಕ ಆಯಾಮಗಳು,ತತ್ವಪದಗಳಲ್ಲಿ ಸಾಮರಸ್ಯ ಭಾರತ, ತತ್ವಪದ ದೊಳಗಿನ ತಿಳಿವು ಬರಹಗಳು ಓದುಗರ ಗಮನವನ್ನು ಸೆಳೆಯುತ್ತವೆ. ತತ್ವಪದಗಳ-ಹೊರನೋಟಕ್ಕೆ ಸ್ಫುರಿಸುವ ಹಾಗೂ ಆಂತರ್ಯದಲ್ಲಿ ಸ್ಫುರಿಸುವ ಅರ್ಥಗಳನ್ನು ವಿಶ್ಲೇಷಿಸಿದ್ದು, ತತ್ವಪದಗಳ ಆಂತರಿಕ ಸೌಂದರ್ಯವನ್ನು ಇಲ್ಲಿಯ ಬರಹಗಳ ಮೂಲಕ ತೋರಿದ ಕೃತಿ ಇದು.
©2024 Book Brahma Private Limited.