ಶ್ರೀಮದ್ ಜಗದ್ಗುರು ಶಂಕರಾಚಾರ್ಯ-ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ರಚಿಸಿದ ಕೃತಿ-ಯೋಗ ಪ್ರಕಾಶಿಕೆ. ಪತಂಜಲಿ ಯೋಗಸೂತ್ರಗಳ ಕನ್ನಡ ವ್ಯಾಖ್ಯಾನ ಎಂಬ ಉಪಶೀರ್ಷಿಕೆಯಡಿ ಯೋಗಶಾಸ್ತ್ರದ ಸ್ವರೂಪ-ಮಹತ್ವವನ್ನು ತಿಳಿಸುವ ಉದ್ದೇಶ ಇಲ್ಲಿದೆ. ಯೋಗಶಾಸ್ತ್ರವು, ಭಾರತೀಯ ಪ್ರಾಚೀನ ಪರಂಪರಾಗತವಾಗಿ ಬಂದ ಅಧ್ಯಯನ ಶಾಸ್ತ್ರವಾಗಿದೆ. ಇದು ಮನಸ್ಸಿನ ಸ್ವರೂಪದ ಚಿಂತನ ಹಾಗೂ ನಿಗ್ರಹದ ಸಾಧನವಾಗಿದೆ. ಯೋಗಶಾಸ್ತ್ರವು ವೇದ-ಉಪನಿಷತ್ತುಗಳನ್ನು ಒಳಗೊಂಡಿವೆ. ನಾಥ ಪಂಥ, ಸೂಫಿ ಪಂಥ, ಬೌದ್ಧ, ಜೈನ ಹೀಗೆ ಪ್ರಾಚೀನ ಧರ್ಮ ಗ್ರಂಥಗಳಲ್ಲೂ ಯೋಗಶಾಸ್ತ್ರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ. ಯೋಗಶಾಸ್ತ್ರದ ತಾರ್ಕಿಕತೆ, ವೈಜ್ಞಾನಿಕತೆ, ಚಿಂತನಶೀಲ ಅಂಶಗಳನ್ನು ಪತಂಜಲಿ ಮಹರ್ಷಿಯು ದೀರ್ಘವಾಗಿ ಚಿಂತನೆ ನಡೆಸಿದ್ದನ್ನು ಕಾಣಬಹುದು. ಚಂಚಲ ಮನಸ್ಸನ್ನು ಒಂದೆಡೆ ನಿಲ್ಲಿಸುವುದು, ಆ ಮೂಲಕ ಏಕಾಗ್ರತೆ ಸಾಧಿಸುವುದು ಯೋಗದ ಉದ್ದೇಶ. ಇದರ ಸೂತ್ರಗಳನ್ನು, ಮಹತ್ವಗಳನ್ನು ಪ್ರಾಚೀನ ಕಾಲದಿಂದಲೂ ಸಮರ್ಥಿಸಿಕೊಳ್ಳುತ್ತಾ ಬಂದಿದ್ದರ ಕುರಿತು ಅಧ್ಯಯನ ಪೂರ್ಣ ವಿವರಗಳಿರುವ ಕೃತಿ ಇದು.
©2024 Book Brahma Private Limited.