ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೂಜ್ಯರು. ಜನಸಾಮಾನ್ಯರಲ್ಲಿ ಕಲೆ-ಸಂಸ್ಕೃತಿ ಕುರಿತು ಅರಿವು ಮೂಡಿಸಲು ಅವರು ಶ್ರೀಸರ್ವಜ್ಞಾನೇಂದ್ರ ಸರಸ್ವತೀ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಅರಣ್ಯದ ಹಸಿರು ಉಳಿಸುವಲ್ಲಿಯೂ ಅವರು ಹೋರಾಟಗಳನ್ನುನಡೆಸಿ, ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ವೇದ-ವೇದಾಂತ ಹಾಗೂ ವಿಜ್ಞಾನ ವಿಷಯಗಳ ಸಂಶೋಧನೆಗಾಗಿ ಅವರು ಬ್ರಹ್ಮ ವಿದ್ಯಾ ಸಂಸ್ಥಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಶ್ರೀಗಳ ನೇತೃತ್ವದಲ್ಲೇ ಮಹಾಸಂಸ್ಥಾನದಿಂದ ‘ಸ್ವರ್ಣವಲ್ಲೀ ಪ್ರಭಾ’ ಎಂಬ ಪತ್ರಿಕೆಯು ಪ್ರಕಟವಾಗುತ್ತಿದೆ.