ಜಿ. ಹನುಮಂತರಾವ್
(12 April 1898)
ಗಂಡೂರು ಹನುಮಂತರಾಯರು ತುಮಕೂರಿನಲ್ಲಿ 1898ರ ಏಪ್ರಿಲ್ 12, ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ., (ತತ್ತ್ವಶಾಸ್ತ್ರ) ಪದವಿಯನ್ನು 1923 ರಲ್ಲಿ ಪಡೆದುಕೊಂಡರು. 1923-43 ರ ಅವಧಿಯಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಅಧ್ಯಾಪಕರಾಗಿ, 1958 ರಲ್ಲಿ ಕಾರ್ಯನಿರತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿಶ್ವವಿದ್ಯಾನಿಲಯದ ಗ್ರಂಥಪಾಲರಾಗಿ, ವಿಶ್ವವಿದ್ಯಾನಿಲಯದ ಪ್ರಕಟಣೆ ಮತ್ತು ಪ್ರಚಾರೋಪನ್ಯಾಸ ಮಾಲೆಯ ರೂವಾರಿಯಾಗಿ (1943-53) ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ ವಿಭಾಗಕ್ಕೆ ಮೂಲಭೂತ ಸೃಜನಶೀಲ ಅಡಿಪಾಯ ಹಾಕಿಕೊಟ್ಟು ಬೆಳೆಸಿದರು. ಕನ್ನಡದಲ್ಲಿ ತತ್ತ್ವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ಸೌಂದರ್ಯಮೀಮಾಂಸೆ ಮುಂತಾದ ವಿಷಯಗಳನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. “ಭಾರತೀಯ ತತ್ವಶಾಸ್ತ್ರದ ವಿವರಣಾತ್ಮಕ ಪರಿಚಯ, ...
READ MORE