About the Author

ಗಂಡೂರು ಹನುಮಂತರಾಯರು ತುಮಕೂರಿನಲ್ಲಿ 1898ರ ಏಪ್ರಿಲ್ 12, ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ., (ತತ್ತ್ವಶಾಸ್ತ್ರ) ಪದವಿಯನ್ನು 1923 ರಲ್ಲಿ ಪಡೆದುಕೊಂಡರು. 1923-43 ರ ಅವಧಿಯಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಅಧ್ಯಾಪಕರಾಗಿ, 1958 ರಲ್ಲಿ ಕಾರ್ಯನಿರತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿಶ್ವವಿದ್ಯಾನಿಲಯದ ಗ್ರಂಥಪಾಲರಾಗಿ, ವಿಶ್ವವಿದ್ಯಾನಿಲಯದ ಪ್ರಕಟಣೆ ಮತ್ತು ಪ್ರಚಾರೋಪನ್ಯಾಸ ಮಾಲೆಯ ರೂವಾರಿಯಾಗಿ (1943-53) ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ ವಿಭಾಗಕ್ಕೆ ಮೂಲಭೂತ ಸೃಜನಶೀಲ ಅಡಿಪಾಯ ಹಾಕಿಕೊಟ್ಟು ಬೆಳೆಸಿದರು. ಕನ್ನಡದಲ್ಲಿ ತತ್ತ್ವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ಸೌಂದರ್ಯಮೀಮಾಂಸೆ ಮುಂತಾದ ವಿಷಯಗಳನ್ನು ಕುರಿತು ಅನೇಕ  ಕೃತಿಗಳನ್ನು ರಚಿಸಿದ್ದಾರೆ. “ಭಾರತೀಯ ತತ್ವಶಾಸ್ತ್ರದ ವಿವರಣಾತ್ಮಕ ಪರಿಚಯ, ಭಗವದ್ಗೀತೆ, ಯೋಗ ದರ್ಶನ, ವೈಶೇಷಿಕ ದರ್ಶನ, ಪಂಚರಾತ್ರ ಆಗಮಗಳು” ಮುಂತಾದವು ಅವರ ಪ್ರಮುಖ ಕೃತಿಗಳು

ಜಿ. ಹನುಮಂತರಾವ್

(12 Apr 1898)